HomeIndiaನ್ಯಾಯ ಕೇಳಲು ಹೋದ ಗ್ರಾಮಸ್ಥರಿಗೆ ಇದೆಂಥಾ ಶಿಕ್ಷೆ..? ವೈರಲ್ ಆಯ್ತು ವಿಡಿಯೋ

ನ್ಯಾಯ ಕೇಳಲು ಹೋದ ಗ್ರಾಮಸ್ಥರಿಗೆ ಇದೆಂಥಾ ಶಿಕ್ಷೆ..? ವೈರಲ್ ಆಯ್ತು ವಿಡಿಯೋ

യു.പിയിൽ പരാതിക്കാരനെ കോഴിയെപ്പോലെ ഇരുത്തിയെന്ന്; എസ്.ഡി.എമ്മിനെതിരെ  അന്വേഷണം | UP 'Murga' Scandal: Villager Made To Sit In Humiliating Position  In Front Of SDM In Bareilly; Video Goes ...

ಉತ್ತರ ಪ್ರದೇಶದ ಬರೇಲಿಯಲ್ಲಿರುವ ಮೀರ್​ಗಂಜ್​​ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಸರ್ಕಾರಿ ಅಧಿಕಾರಿಯು ದೂರದಾರನನ್ನು ಹುಂಜದಂತೆ ಮಂಡಿಯೂರಿ ಕುಳಿತುಕೊಳ್ಳುವ ಶಿಕ್ಷೆ ನೀಡಿದ್ದು, ಈ ಘಟನೆಯ ವಿಡಿಯೋ ಇದೀಗ ವೈರಲ್​ ಆಗಿದೆ. ವಿಡಿಯೋದಲ್ಲಿ ಎಸ್​ಡಿಎಂ ತನ್ನ ಖುರ್ಚಿಯಲ್ಲಿ ಕುಳಿತಿರೋದನ್ನ ಕಾಣಬಹುದಾಗಿದೆ. ಹಾಗೂ ದೂರದಾರನು ಮಂಡಿಯೂರಿದ್ದನ್ನು ಸಹ ನೋಡಬಹುದಾಗಿದೆ.

ಎಸ್​ಡಿಎಂನನ್ನು ಉದಿತ್​ ಪವಾರ್​ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸಿ ಎಂಬ ಬೇಡಿಕೆಯಿಟ್ಟುಕೊಂಡು ಎಸ್​ಡಿಎಂಗೆ ಬಂದಿದ್ದರು ಎನ್ನಲಾಗಿದೆ. ಅತಿಕ್ರಮಣವಾಗಿದೆ ಎನ್ನಲಾದ ಭೂಮಿಯು ಸದ್ಯ ಸ್ಮಶಾನವಾಗಿ ಬಳಕೆಯಾಗುತ್ತಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ, ಎಸ್‌ಡಿಎಂ ಉದಿತ್ ಪವಾರ್ ಹೇಳಿಕೆಯಲ್ಲಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದೆಲ್ಲ ಕೇವಲ ಒಂದು ಕಟ್ಟುಕತೆಯಾಗಿದೆ. ನಮ್ಮ ಗ್ರಾಮದಲ್ಲಿ ಶವಸಂಸ್ಕಾರ ಭೂಮಿಯು ಅಕ್ರಮ ಒತ್ತುವರಿ ಮಾಡಿದ ಭೂಮಿಯಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಅವರೇ ಏಕಾಏಕಿ ನನ್ನ ಎದುರು ಮಂಡಿಯೂರಿ ಕುಳಿತಿದ್ದಾರೆ. ಒಂದು ವೇಳೆ ಆ ಭೂಮಿ ಒತ್ತುವರಿಯಾಗಿದ್ದು ಎಂಬುದು ಸಾಬೀತಾದರೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಅಲ್ಲಿಯವರೆಗೆ ಗ್ರಾಮಸ್ಥರು ತಾಳ್ಮೆಯಿಂದ ಕಾಯಬೇಕು ಎಂದು ಹೇಳಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular