HomeLatest Newsತಂಡದ ಸದಸ್ಯರಿಗೆ ಡ್ರಿಂಕ್ಸ್ ತೆಗೆದುಕೊಂಡು ಮೈದಾನಕ್ಕೆ ಕೊಹ್ಲಿ ಎಂಟ್ರಿ; ವಿಡಿಯೋ ವೈರಲ್

ತಂಡದ ಸದಸ್ಯರಿಗೆ ಡ್ರಿಂಕ್ಸ್ ತೆಗೆದುಕೊಂಡು ಮೈದಾನಕ್ಕೆ ಕೊಹ್ಲಿ ಎಂಟ್ರಿ; ವಿಡಿಯೋ ವೈರಲ್

ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ನಡೆದ ಏಷ್ಯಾಕಪ್ 2023 ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದು, ಏಕದಿನ ಪಂದ್ಯದಲ್ಲಿ ತಮ್ಮ 47ನೇ ಶತಕ ದಾಖಲಿಸಿದ್ದರು.

ಈಗ ನಡೆಯುತ್ತಿರುವ ಬಾಂಗ್ಲಾ ದೇಶದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ರೆಸ್ಟ್ ನಲ್ಲಿದ್ದ ಅವರು ತಮ್ಮ ತಂಡದ ಆಟಗಾರರಿಗೆ ಕೂಲ್ ಡ್ರಿಂಕ್ಸ್ ತೆಗೆದುಕೊಂಡು ಮೈದಾನಕ್ಕೆ ಹೋಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶಿಷ್ಟ ರೀತಿಯಲ್ಲಿ ವಿರಾಟ್ ಕೊಹ್ಲಿ ಮೈದಾನಕ್ಕೆ ಕೂಲ್ ಡ್ರಿಂಕ್ಸ್ ತೆಗೆದುಕೊಂಡು ಹೋಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಹ್ಲಿ ಅಭಿಮಾನಿಗಳು ಈ ವಿಡಿಯೋ ಹಂಚಿಕೊಂಡು ಕೊಹ್ಲಿ ಸರಳತೆಯನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.

https://twitter.com/DisneyPlusHS/status/1702631956847235323?ref_src=twsrc%5Etfw%7Ctwcamp%5Etweetembed%7Ctwterm%5E170263195684723

For Latest News Updates, Join Our Whatsapp Community🚩
RELATED ARTICLES

Most Popular