HomeInternationalViral Video | ಪ್ರವಾಹದಂತೆ ರಸ್ತೆ ತುಂಬಾ ಹರಿದ ರೆಡ್ ವೈನ್; ದೃಶ್ಯ ನೋಡಿ ಅಚ್ಚರಿಗೊಂಡ...

Viral Video | ಪ್ರವಾಹದಂತೆ ರಸ್ತೆ ತುಂಬಾ ಹರಿದ ರೆಡ್ ವೈನ್; ದೃಶ್ಯ ನೋಡಿ ಅಚ್ಚರಿಗೊಂಡ ಜನತೆ

ಭಾರಿ ಮಳೆಗೆ ರಸ್ತೆ ತುಂಬಾ ನೀರು ಹರಿದು ಪ್ರವಾಹವಾಗಿರುವುದನ್ನು ನೀವು ನೋಡಿರ್ತೀರಾ. ಆದರೆ, ಮದ್ಯ ರಸ್ತೆಯಲ್ಲಿ ಪ್ರವಾಹದಂತೆ ಹರಿಯುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಪೋರ್ಚುಗಲ್ ಪಟ್ಟಣದಲ್ಲಿ 6 ಲಕ್ಷ ಗ್ಯಾಲನ್‌ಗಳಷ್ಟು ರೆಡ್ ವೈನ್‌ ಪ್ರವಾಹದಂತೆ ನದಿಯಾಗಿ ಮಾರ್ಪಟ್ಟಿವೆ

ಪೋರ್ಚುಗೀಸ್‌ನ ಸಣ್ಣ ಪಟ್ಟಣವಾದ ಸಾವೊ ಲೊರೆಂಕೊ ಡಿ ಬೈರೊದಲ್ಲಿನ ಡಿಸ್ಟಿಲರಿಯಲ್ಲಿ ಈ ಘಟನೆ ನಡೆದಿದೆ. 600,000 ಗ್ಯಾಲನ್‌ಗಳಷ್ಟು ಮದ್ಯವನ್ನು ಸಾಗಿಸುತ್ತಿದ್ದ ಬ್ಯಾರೆಲ್‌ಗಳು ಅನಿರೀಕ್ಷಿತವಾಗಿ ಕುಸಿದು ಬಿದ್ದಿದೆ. ಈ ವೇಳೆ ಕೆಂಪು ವೈನ್ ಪ್ರವಾಹದಂತೆ ರಸ್ತೆ ತುಂಬೆಲ್ಲಾ ಹರಿದಿದೆ.

ಸದ್ಯ, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುಮಾರು 2,000 ಜನಸಂಖ್ಯೆಯನ್ನು ಹೊಂದಿರುವ ಸೋ ಲೊರೆಂಕೊ ಡಿ ಬೈರೊ ಎಂಬ ಪುಟ್ಟ ಪಟ್ಟಣದಲ್ಲಿ ಕಡಿದಾದ ಬೆಟ್ಟದ ಕೆಳಗೆ ರಸ್ತೆಯ ತುಂಬೆಲ್ಲಾ ಕೆಂಪು ವೈನ್ ನದಿಯಂತೆ ಹರಿಯುವುದನ್ನು  ವಿಡಿಯೋದಲ್ಲಿ ನೋಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸೋರಿಕೆಯು ಎಷ್ಟು ದೊಡ್ಡದಾಗಿದೆ ಎಂದರೆ, ಚೆಲ್ಲಿದ ವೈನ್ ಒಲಿಂಪಿಕ್ ಗಾತ್ರದ ಈಜುಕೊಳವನ್ನು ತುಂಬಿರಬಹುದು. ಇದು ಪರಿಸರ ಎಚ್ಚರಿಕೆಯನ್ನು ಸಹ ಉಂಟುಮಾಡಿದೆ.

ಸೆರ್ಟಿಮಾ ನದಿಗೆ ವೈನ್ ಸೇರುವುದನ್ನು ತಡೆಯುವ ಸಲುವಾಗಿ ಅಧಿಕಾರಿಗಳು ಕಾರ್ಯಪ್ರವೃತ್ತರಾದರು. ಅನಾಡಿಯಾ ಅಗ್ನಿಶಾಮಕ ಇಲಾಖೆಯು ಪ್ರವಾಹವನ್ನು ಸ್ಥಗಿತಗೊಳಿಸಿತು. ಅದನ್ನು ನದಿಯಿಂದ ದೂರಕ್ಕೆ ಸ್ಥಳಾಂತರಿಸಿತು. ಡಿಸ್ಟಿಲರಿ ಬಳಿಯ ನಿವಾಸದ ನೆಲಮಾಳಿಗೆಯಲ್ಲಿ ವೈನ್ ಪ್ರವಾಹ ಹರಿಯಿತು ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular