ಅಮೆರಿಕದ ಗಾಯಕ ಹಾಗೂ ಗೀತರಚನೆಕಾರ ರಾಬಿನ್ ಥಿಕ್ ತಮ್ಮ ದುರ್ವರ್ತನೆ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ . ಗಾಯಕ ರಾಬಿನ್ ಥಿಕ್ ತಮ್ಮ ನಿಶ್ಚಿತ ವಧು ಏಪ್ರಿಲ್ ಲವ್ ಗೇರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ವೆಸ್ಟ್ ಹಾಲಿವುಡ್ ಬಾರ್ ಹೊರಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇಲ್ಲಿ ಇವರಿಬ್ಬರು ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಟ್ವಿಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಲವ್ ಗೇರಿ ತನ್ನನ್ನು ಒಬ್ಬಂಟಿಯಾಗಿ ಇರಲು ಬಿಡುವಂತೆ ರಾಬಿನ್ ಥಿಕ್ ಬಳಿ ಹೇಳುತ್ತಿರೋದನ್ನು ಕಾಣಬಹುದಾಗಿದೆ. ಈ ವಿಡಿಯೋ ಶೇರ್ ಮಾಡಿರುವ ಅಭಿಮಾನಿಯು, ಈ ಘಟನೆ ನೋಡಿ ನಾನು ಶಾಕ್ ಆಗಿದ್ದೇನೆ. ರಾಬಿನ್ ಥಿಕ್ ಈ ರೀತಿ ವರ್ತಿಸುತ್ತಿದ್ದರೂ ಸಹ ಯಾರೂ ಮಧ್ಯ ಪ್ರವೇಶಿಸಲಿಲ್ಲ. ಓರ್ವ ಪುರುಷ ಈ ರೀತಿ ಸಾರ್ವಜನಿಕವಾಗಿ ಮಹಿಳೆಯನ್ನು ಎಳೆದಾಡುವುದು ಕ್ಷಮಿಸಲು ಅಸಾಧ್ಯ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ನೋಡಿದ ನೆಟ್ಟಿಗರು ರಾಬಿನ್ ಥಿಕ್ ಅವರ ನಡತೆಯನ್ನು ಬೇಜಾವಾಬ್ದಾರಿ ನಡೆ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಮಹಿಳೆಯರು ಸ್ಟ್ರಾಂಗ್ ಆಗಿರಬೇಕು ಅಂತಾ ಅಭಿಪ್ರಾಯ ಹೊರಹಾಕಿದ್ದಾರೆ.