HomeInternationalನಂಬಿದ್ರೆ ನಂಬಿ ಬಿಟ್ರೆ ಬಿಡಿ.....! ಸಿನಿಮಾ ನೋಡುವುದರಲ್ಲೂ ʼವಿಶ್ವ ದಾಖಲೆʼ

ನಂಬಿದ್ರೆ ನಂಬಿ ಬಿಟ್ರೆ ಬಿಡಿ…..! ಸಿನಿಮಾ ನೋಡುವುದರಲ್ಲೂ ʼವಿಶ್ವ ದಾಖಲೆʼ

2022ರ ಮೇ 7ನೇ ತಾರೀಖಿನಿಂದ 2023ರವರೆಗೆ ಥಿಯೇಟರ್​ನಲ್ಲಿ ಬರೋಬ್ಬರಿ 777 ಸಿನಿಮಾಗಳನ್ನು ವೀಕ್ಷಿಸುವ ಮೂಲಕ ಅಮೆರಿಕದ ವ್ಯಕ್ತಿಯೊಬ್ಬರು ಒಂದು ವರ್ಷದ ಅವಧಿಯಲ್ಲಿ ಚಿತ್ರಮಂದಿರದಲ್ಲಿ ಅತೀ ಹೆಚ್ಚು ಸಿನಿಮಾ ವೀಕ್ಷಿಸಿದ ವ್ಯಕ್ತಿ ಎಂಬ ಗಿನ್ನೆಸ್​ ದಾಖಲೆಯನ್ನು ಬರೆದಿದ್ದಾರೆ.

ಪೆನ್ಸಿಲ್ವೆನಿಯಾದ ಕಾರ್ಲಿಸ್ಲಿ ನಗರದವರಾದ ಜಕರಿಯಾ ಸ್ವೋಪ್​​ Minions: Rise of Gru ಎಂಬ ಸಿನಿಮಾ ವೀಕ್ಷಿಸೋ ಮೂಲಕ ಈ ಮ್ಯಾರಥಾನ್​​ ಆರಂಭಿಸಿದ್ರು. ಒಂದು ವರ್ಷದ ಬಳಿಕ ಇಂಡಿಯಾನಾ ಜೋನ್ಸ್​ ಹಾಗೂ ಡಯಲ್​ ಆಫ್​ ಡೆಸ್ಟಿನಿ ಸಿನಿಮಾ ನೋಡುವ ಮೂಲಕ ತಮ್ಮ ಮೂವಿ ಮ್ಯಾರಥಾನ್​ ಪೂರ್ಣಗೊಳಿಸಿದ್ದಾರೆ.

32 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಸ್ಪೈಡರ್ ಮ್ಯಾನ್​ ಸಿನಿಮಾವನ್ನು ಬರೋಬ್ಬರಿ 292 ಬಾರಿ ವೀಕ್ಷಿಸಿದ್ದರಂತೆ. ಇದರಿಂದ ಸ್ಪೂರ್ತಿ ಪಡೆದ ಸ್ವೋಪ್​ ತಾನು ಹೇಗಾದರೂ ಮಾಡಿ 2018ರಲ್ಲಿ 715 ಸಿನಿಮಾ ವೀಕ್ಷಿಸಿ ಗಿನ್ನೆಸ್​ ದಾಖಲೆ ಬರೆದಿದ್ದ ವಿನ್ಸೆಂಟ್​ ಕ್ರೋನ್​ ವಿಶ್ವ ದಾಖಲೆ ಮುರಿಯಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರಿ ಸುಮಾರು 800 ಸಿನಿಮಾಗಳನ್ನು ವೀಕ್ಷಿಸಲು ಜಕರಿಯಾ ಸಾವಿರಾರು ಡಾಲರ್​ ಖರ್ಚು ಮಾಡಬೇಕಿತ್ತು. ಹೀಗಾಗಿ ಹ್ಯಾರಿಸ್​ಬರ್ಗ್​ನಲ್ಲಿರುವ ರೀಗಲ್​ ಸಿನಿಮಾಸ್​ನಲ್ಲಿ ಅನಿಯಮಿತ ಸದಸ್ಯತ್ವ ಪಡೆಯುವ ಮೂಲಕ ಹಣ ಉಳಿತಾಯ ಮಾಡಿದ್ರು. 777 ಸಿನಿಮಾಗಳನ್ನು ವೀಕ್ಷಿಸೋಕೆ ಜಕರಿಯಾ 300 ಡಾಲರ್​ ಮಾತ್ರ ಖರ್ಚು ಮಾಡಿದ್ದಾರೆ. ಈ ರೀತಿ ಥಿಯೇಟರ್​ಗಳಲ್ಲಿ ಹಲವಾರು ಸಿನಿಮಾಗಳನ್ನು ವೀಕ್ಷಿಸೋದು ಮಾನಸಿಕವಾಗಿ ಚಾಲೆಂಜಿಂಗ್​ ಆಗಿರುತ್ತೆ ಅಂತಾ ಜಕರಿಯಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular