HomeLatest Newsಭಾರತ ವಿರೋಧಿ ಘೋಷಣೆ ಕೂಗಿದ್ದಕ್ಕೆ ಆ ರೀತಿ ಮಾಡಿದೆ; ಮಧ್ಯದ ಬೆರಳು ತೋರಿಸಿದ್ದಕ್ಕೆ ಗೌತಮ್ ಗಂಭೀರ್...

ಭಾರತ ವಿರೋಧಿ ಘೋಷಣೆ ಕೂಗಿದ್ದಕ್ಕೆ ಆ ರೀತಿ ಮಾಡಿದೆ; ಮಧ್ಯದ ಬೆರಳು ತೋರಿಸಿದ್ದಕ್ಕೆ ಗೌತಮ್ ಗಂಭೀರ್ ಸ್ಪಷ್ಟನೆ

ಇತ್ತೀಚೆಗೆ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಭಾರತ – ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯದ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವೀಕ್ಷಕ ವಿವರಣೆ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಬರುತ್ತಿರುವಾಗ ವಿರಾಟ್ ಕೊಹ್ಲಿಯವರ ಕೆಲ ಅಭಿಮಾನಿಗಳು ‘ಕೊಹ್ಲಿ ಕೊಹ್ಲಿ’ ಎಂದು ಘೋಷಣೆ ಕೂಗಿದ ವೇಳೆ ಆಕ್ರೋಶಗೊಂಡ ಗೌತಮ್ ಗಂಭೀರ್ ಮಧ್ಯದ ಬೆರಳು ತೋರಿಸಿದ್ದರು.

ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಗರಂ ಆಗಿದ್ದರು. ಇದೀಗ ಅದಕ್ಕೆ ಸ್ಪಷ್ಟನೆ ನೀಡಿರುವ ಗೌತಮ್ ಗಂಭೀರ್, ನಾನು ಕೊಹ್ಲಿ ಪರ ಘೋಷಣೆ ಕೂಗಿದ್ದಕ್ಕೆ ಆ ವರ್ತನೆ ತೋರಿಲ್ಲ. ಕೆಲವರು ಭಾರತ ವಿರೋಧಿ ಘೋಷಣೆ ಜೊತೆಗೆ ಕಾಶ್ಮೀರದ ಕುರಿತೂ ಘೋಷಣೆಗಳನ್ನು ಕೂಗಿದ್ದರು, ಇದಕ್ಕಾಗಿ ಆ ರೀತಿ ಮಾಡಿದ್ದೆ ಎಂದಿದ್ದಾರೆ.

ಆದರೆ ಅವರ ಈ ಹೇಳಿಕೆ ಕೂಡಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್ ಆಗುತ್ತಿದ್ದು, ಕೊಹ್ಲಿ ಪರ ಘೋಷಣೆ ಕೂಗಿದ ಸಂದರ್ಭದಲ್ಲಿಯೇ ಗೌತಮ್ ಗಂಭೀರ್ ಮಧ್ಯದ ಬೆರಳು ತೋರಿಸಿದ್ದಾರೆ. ಇದೀಗ ಆಕ್ರೋಶ ವ್ಯಕ್ತವಾದ ಬಳಿಕ ಸುಳ್ಳು ಸಮರ್ಥನೆಗಳನ್ನು ನೀಡುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ಆರೋಪಿಸಿದ್ದಾರೆ. ಜೊತೆಗೆ ರಾಜಕಾರಣಿಗಳು ತಮಗೆ ಅನುಕೂಲ ಬಂದ ರೀತಿಯಲ್ಲಿ ಹೇಳಿಕೆಗಳನ್ನು ಬದಲಾಯಿಸುತ್ತಾರೆ ಎಂದು ಗೇಲಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://youtu.be/9yIiRGh8inY

For Latest News Updates, Join Our Whatsapp Community🚩
RELATED ARTICLES

Most Popular