BIGG NEWS : ರಾಜ್ಯ ಸರ್ಕಾರದಿಂದ ಇಂದು `ಬರ ಪೀಡಿತ ತಾಲೂಕುಗಳ’ ಪಟ್ಟಿ ಘೋಷಣೆ

ಬೆಂಗಳೂರು : ರಾಜ್ಯ ಸರ್ಕಾರವು ಇಂದು ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಘೋಷಣೆ ಮಾಡಲಿದ್ದು, ಮಳೆ ಇಲ್ಲದ  ತಾಲೂಕುಗಳಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಮಳೆ ಕೊರತೆ ಉಂಟಾಗಿರುವ ರಾಜ್ಯದ ವಿವಿಧ ತಾಲೂಕುಗಳ ಬರ ಪರಿಸ್ಥಿತಿ ಕುರಿತು ಸಲ್ಲಿಕೆಯಾಗಿರುವ ವರದಿ ಬಗ್ಗೆ ಸಚಿವ ಸಂಪುಟದ ಉಪಸಮಿತಿ ಇಂದು ಪರಿಶೀಲಿಸಿ ಬರ ಪೀಡಿತ ತಾಲೂಕುಗಳ ಪಟ್ಟಿ ಘೋಷಿಸಲಿದೆ.

ಮಳೆ ಕೊರತೆ ಶೇ. 60 ಕ್ಕಿಂತ ಹೆಚ್ಚಿದ್ದು, ಸತತ 3 ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಶುಷ್ಕ ವಾತಾವರಣ ಕಂಡು ಬಂದಿರುವ ಪ್ರದೇಶಗಳನ್ನು ಬರಪೀಡಿತ ಎಂದು ಪರಿಗಣಿಸಲಾಗಿದ್ದು, ಕೃಷಿ ಬಿತ್ತನೆ ಪ್ರದೇಶ, ಉಪಗ್ರಹ ಆಧಾರಿತ ಬೆಳೆ ಆರೋಗ್ಯ ಸೂಚ್ಯಂಕ, ತೇವಾಂಶ ಕೊರತೆ ಹಾಗೂ ನದಿಗಳ ಹರಿವು ಸೇರಿ ಎಲ್ಲವನ್ನೂ ಆಧರಿಸಿ ಬರ ತಾಲೂಕು ಘೋಷಣೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read