HomeLatest NewsBREAKING: ದನ ಮೇಯಿಸಲು ಹೋಗಿದ್ದ ವೇಳೆ ಕೆರೆಗೆ ಬಿದ್ದು ಸಹೋದರರು ಸಾವು

BREAKING: ದನ ಮೇಯಿಸಲು ಹೋಗಿದ್ದ ವೇಳೆ ಕೆರೆಗೆ ಬಿದ್ದು ಸಹೋದರರು ಸಾವು

ಹಾಸನ: ದನ ಮೇಯಿಸಲು ತೆರಳಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಹೋದರರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ದುದ್ದ ಸಮೀಪದ ಒಳಗೇರಹಳ್ಳಿ ಬಳಿ ನಡೆದಿದೆ.

ದರ್ಶನ್(15) ಹಾಗೂ ಲಕ್ಷ್ಮಿಕಾಂತ್(5) ಮೃತಪಟ್ಟ ಸಹೋದರರು. ಇವರು ಒಳಗೇರಹಳ್ಳಿಯ ಅರ್ಚಕ ರಾಮಚಂದ್ರ ಮತ್ತು ರತ್ನ ದಂಪತಿಯ ಪುತ್ರರಾಗಿದ್ದಾರೆ. ದನ ಮೇಯಿಸಲು ತೆರಳಿದ್ದ ಲಕ್ಷ್ಮಿಕಾಂತ್ ಮತ್ತು ದರ್ಶನ್ ಅವರು ವಾಪಸ್ ಬಂದಿರಲಿಲ್ಲ. ಕೆರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದಾಗ ಸಹೋದರರ ಶವ ಪತ್ತೆಯಾಗಿದೆ. ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular