
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಕಿಚ್ಚ ಸುದೀಪ್ ಬರ್ತಡೇ ಪಾರ್ಟಿಯsಲ್ಲಿ ನಾಯಕರು ಭಾಗಿಯಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಬಿ.ಸಿ. ಪಾಟೀಲ್, ರಾಜೂಗೌಡ ಅವರೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸಮಾಲೋಚನೆ ನಡೆಸಿದ್ದಾರೆ. ಮೂವರು ನಾಯಕರ ಚರ್ಚೆ ಬಹಳ ಕುತೂಹಲ ಮೂಡಿಸಿದೆ.
ಮೂವರು ನಾಯಕರು ಸುದೀಪ್ ಬರ್ತಡೇ ಪಾರ್ಟಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ್ದು, ಮತ್ತಿಬ್ಬರು ಬಿಜೆಪಿ ನಾಯಕರಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗಾಳ ಹಾಕಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.


