ಮೈಸೂರು: 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಸತ್ಯ ಬಿಚ್ಚಿಟ್ಟಿದ್ದಾರೆ.
2018 ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋಲುತ್ತೇನೆ ಎನ್ನುವ ವಾಸನೆ ಇತ್ತು. ಆ ಕಾರಣಕ್ಕೆ ನಾನು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ ಎಂದು ಕನಕ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಷ್ಟು ದೂರದ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಜನ ಗೆಲ್ಲಿಸಿದ್ದರು. ಆದರೆ, ಇಲ್ಲಿನವರೇ ನನ್ನನ್ನು ಸೋಲಿಸಿದರು ಎಂದು ಹೇಳಿದ್ದಾರೆ.
ಈ ಕ್ಷೇತ್ರದಲ್ಲಿ ನಾನು ಮಾಡಿದಷ್ಟು ಕೆಲಸ ಯಾರೂ ಮಾಡೇ ಇಲ್ಲ. ಆದರೆ, ಕೆಲಸಕ್ಕೆ ಬಾರದ ಯಾರನ್ನೋ ಈ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ. ಕೆಲಸ ಮಾಡುವವರನ್ನು ಸೋಲಿಸಿ ಬಿಡುತ್ತಾರೆ. ನನ್ನನ್ನು ಸೋಲಿಸಿದವರಿಗೂ ಧನ್ಯವಾದಗಳು. ಗೆಲ್ಲಿಸಿದವರೆಗೂ ಧನ್ಯವಾದಗಳು. ರಾಜಕೀಯದಲ್ಲಿ ಸೋಲು, ಗೆಲುವು ಮುಖ್ಯ ಎಂದು ಚಾಮುಂಡೇಶ್ವರಿ ಸೋಲಿನ ಬಗ್ಗೆ ಸಿದ್ದರಾಮಯ್ಯ ಮೆಲುಕು ಹಾಕಿದ್ದಾರೆ.