HomeKarnatakaBIG NEWS: ನನ್ನ ರೇಣುಕಾಚಾರ್ಯ ಭೇಟಿಗೆ ರಾಜಕೀಯ ಅರ್ಥ ಬೇಡ; ಟೀ ಕುಡಿಸಿ ಕಳಿಸಿದ್ದೇನೆ ಎಂದ...

BIG NEWS: ನನ್ನ ರೇಣುಕಾಚಾರ್ಯ ಭೇಟಿಗೆ ರಾಜಕೀಯ ಅರ್ಥ ಬೇಡ; ಟೀ ಕುಡಿಸಿ ಕಳಿಸಿದ್ದೇನೆ ಎಂದ ಸಚಿವ ಮಲ್ಲಿಕಾರ್ಜುನ

ದಾವಣಗೆ: ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಸೇರಲ್ಲ, ಬರಿ ಸೌಹಾರ್ದಯುತ ಭೇಟಿ ಅಷ್ಟೇ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಎಂ.ಪಿ.ರೇಣುಕಾಚಾರ್ಯ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಚರ್ಚಿಸಿದ ಬಳಿಕ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಿಎಂ ಭೇಟಿ ಬೆನ್ನಲ್ಲೇ ಡಿಸಿಎಂ ಹಾಗೂ ಸಚಿವರನ್ನು ರೇಣುಕಾಚಾರ್ಯ ಭೇಟಿಯಾಗಿರುವುದು, ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾಗಿದ್ದಾರೆ ಎಂದು ಹೇಳಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೇಣುಕಾಚಾರ್ಯ ಭೇಟಿ ವಿಚಾರವಾಗಿ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಮಲ್ಲಿಕಾರ್ಜುನ, ನನ್ನ ಹಾಗೂ ಎಂ.ಪಿ.ರೇಣುಕಾಚಾರ್ಯ ಭೇಟಿಗೆ ರಾಜಕೀಯ ಅರ್ಥ ಬೇಡ. ಟೀ ಕುಡಿಸಿ ಕಳುಹಿಸಿದ್ದೇನೆ. ಬೇರೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular