ನವದೆಹಲಿ : ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇಸ್ರೋ ಇದೀಗ ಸೂರ್ಯಯಾನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರಂದು ಸೌರನೌಕೆ ಆದಿತ್ಯ-ಎಲ್1 ಉಡಾವಣೆಗೆ ಸಿದ್ಧತೆ ನಡೆಸಿದೆ.
ಇಸ್ರೋ ಈಗಾಗಲೇ ಆದಿತ್ಯ-ಎಲ್ 1 ಸಿದ್ಧಪಡಿಸಿದ್ದು, ಸೌರ ಕರೊನ ಎಂದು ಕರೆಯುವ ಸೂರ್ಯನ ಹೊರ ವಾತಾವರಣ ಹಾಗೂ ಸೀಟು ಎಂದು ಗುರುತಿಸುವ ಸೌರ ಬಿರುಗಾಳಿ ರಹಸ್ಯೆ ಅಧ್ಯಯನಕ್ಕೆ ಮುಂದಾಗಿದ್ದು, ಸೆಪ್ಟೆಂಬರ್ 2 ರಂದೇ ನೌಕೆ ಉಡಾವಣೆ ಆಗುವ ಸಾಧ್ಯತೆ ಇದೆ.
ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲ್ಯಾಗ್ರೇಂಜಿಯನ್ ಪಾಯಿಂಟ್ ನಲ್ಲಿ ಆದಿತ್ಯ ನೆಲೆ ನಿಂತು ಸೂರ್ಯನ ಅಧ್ಯಯನ ಮಾಡಲಿದೆ ಇಸ್ರೋ ತಿಳಿಸಿದೆ.