HomeKarnatakaJOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ಆಗಸ್ಟ್ 28 ರಂದು ಕೊಪ್ಪಳದಲ್ಲಿ 'ಉದ್ಯೋಗ ಮೇಳ'

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ಆಗಸ್ಟ್ 28 ರಂದು ಕೊಪ್ಪಳದಲ್ಲಿ ‘ಉದ್ಯೋಗ ಮೇಳ’

ಕೊಪ್ಪಳ: ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್. ಆಗಸ್ಟ್ 28 ರಂದು ಕೊಪ್ಪಳದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಆಸಕ್ತರು ಭಾಗಿಯಾಗಬಹುದಾಗಿದೆ.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವಾಕ್ ಇನ್ ಇಂಟರ್ವ್ಯೂವನ್ನು ಆಗಸ್ಟ್ 28ರ ಬೆಳಿಗ್ಗೆ 10 ರಿಂದ 2.30ರವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯಲಿದೆ.
ಅನ್ನದಾತ ಬಯೋ ಪ್ಲಾನಟೆಕ್ ಪ್ರೈ.ಲಿ ಹುಬ್ಬಳ್ಳಿ, ಸ್ಪಂದನಾ ಸ್ಪೂರ್ತಿ ಫೈನಾನ್ಸ್ ಲಿಮಿಟೆಡ್, ವಿಶ್ವತೇಜ ಮೋಟರ್ಸ್ ಕೊಪ್ಪಳ, ಸ್ವಮಾನ ಫೈನಾನ್ಸ್ ರವರು ಆಗಮಿಸಿ ತಮ್ಮಲ್ಲಿನ ಖಾಲಿ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ., ಪಿಯುಸಿ ಐಟಿಐ ಮತ್ತು ಬಿಇ ಹೊರತುಪಡಿಸಿ ಯಾವುದೇ ಪದವಿ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ. ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.

ಆಸಕ್ತಿಯುಳ್ಳ 18 ರಿಂದ 32 ವರ್ಷದ ವರೆಗಿನ ಅರ್ಹ ವಿದ್ಯಾರ್ಹತೆ ಹೊಂದಿದ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡಿನ ಪ್ರತಿ, ಒಂದ ರಿಂದ ಮೂರು ಬಯೋಡಾಟಾ(ರೆಜುಮ್) ಹಾಗೂ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳೊಂದಿಗೆ ವಾಕ್ ಇನ್ ಇಂಟರ್ವ್ಯೂವನಲ್ಲಿ ಭಾಗವಹಿಸಿ ಉದ್ಯೋಗದ ನೆರವು ಪಡೆಯಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಅಥವಾ ದೂ.ಸಂ: 08539-220859, 8105693234, 6361143422 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular