alex Certify BREAKING : `ಚಂದ್ರಯಾನ-3 ಲ್ಯಾಂಡಿಂಗ್’ ಪ್ರಕ್ರಿಯೆ ಆರಂಭ : ಕೆಲವೇ ನಿಮಿಷದಲ್ಲಿ ಚಂದ್ರನ ಸ್ಪರ್ಶಿಸಲಿದೆ `ವಿಕ್ರಮ್ ಲ್ಯಾಂಡರ್’! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : `ಚಂದ್ರಯಾನ-3 ಲ್ಯಾಂಡಿಂಗ್’ ಪ್ರಕ್ರಿಯೆ ಆರಂಭ : ಕೆಲವೇ ನಿಮಿಷದಲ್ಲಿ ಚಂದ್ರನ ಸ್ಪರ್ಶಿಸಲಿದೆ `ವಿಕ್ರಮ್ ಲ್ಯಾಂಡರ್’!

ಬೆಂಗಳೂರು : ಭಾರತೀಯ ಬಾಹ್ಯಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಲು ಹಂತಿಮ ಹಂತಕ್ಕೆ ಬಂದಿದ್ದು, ಇದೀಗ ವಿಕ್ರಮ್ ಲ್ಯಾಂಡರ್ ನ ವೇಗ ತಗ್ಗಿಸುವ ಪ್ರಕ್ರಿಯೆ ಆರಂಭವಾಗಿದೆ.

ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು ತಲುಪಿದೆ ಮತ್ತು ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಜ್ಜಾಗಿದೆ. ಇದೀಗ ವಿಕ್ರಮ್ ಲ್ಯಾಂಡರ್ ನ ವೇಗವನ್ನು ತಗ್ಗಿಸುವ ಕಾರ್ಯ ಶುರುವಾಗಿದೆ. ಸಂಜೆ 5.45ರಿಂದಲೇ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭವಾಗಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಸ್ಪರ್ಶ ಮಾಡಲಿದೆ.

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಯೋಜನೆ ಬಹುತೇಕ ಯಶಸ್ವಿಯ ಹಂತದಲ್ಲಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಸಂಜೆ 6 ಗಂಟೆ 4 ನಿಮಿಷ ಸುಮಾರಿಗೆ ಚಂದ್ರಯಾನದ ನೌಕೆ ಚಂದ್ರನ ಮೇಲೆ ಕಾಲಿಡಲಿದೆ.

ಚಂದ್ರಯಾನ 3 ರ ಲೈವ್ ಲ್ಯಾಂಡಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?

https://www.isro.gov.in/LIVE_telecast_of_Soft_landing.html?tag=times_of_india_web-21  ಮೂಲಕ ಚಂದ್ರಯಾನ 3 ಯನ್ನು ನೀವು ಲೈವ್ ಆಗಿ ವೀಕ್ಷಣೆ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...