HomeKarnataka'ಚಂದ್ರಯಾನ-3' ಯಶಸ್ವಿಗಾಗಿ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದ ಪೇಜಾವರ ಶ್ರೀ

‘ಚಂದ್ರಯಾನ-3’ ಯಶಸ್ವಿಗಾಗಿ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿದ ಪೇಜಾವರ ಶ್ರೀ

ಉಡುಪಿ : ‘ಚಂದ್ರಯಾನ-3’ ಯಶಸ್ವಿಯಾಗಲೆಂದು ದೇಶಾದ್ಯಂತ ಪೂಜೆ ಹೋಮ ಹವನಗಳನಡೆಸಲಾಗಿದೆ. ಇಂದು ಸಂಜೆ 6:04 ಕ್ಕೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ.

ಅದೇ ರೀತಿ ಉಡುಪಿ ಮಠದ ಪೇಜಾವರ ಶ್ರೀಗಳು ಶ್ರೀ ಕೃಷ್ಣ ದೇವರಿಗೆ ತುಪ್ಪದ ದೀಪ ಹಚ್ಚಿ ಪೂಜೆ ಸಲ್ಲಿಸಿದ್ದಾರೆ. ಚಂದ್ರಯಾನ-3’ ಯಶಸ್ವಿಯಾಗಲೆಂದು ತುಪ್ಪದ ದೀಪ ಹಚ್ಚಿ ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಗೆ ಕ್ಷಣಗಣನೆಯಾಗಿದ್ದು, ರಾಜ್ಯದೆಲ್ಲೆಡೆ ಹೋಮ ಹವನ, ಪ್ರಾರ್ಥನೆ ಜೋರಾಗಿದೆ. ಚಂದ್ರಯಾನ-3 ಯಶಸ್ವಿಯಾಗಲೆಂದು ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಬೆಂಗಳೂರಿನ ನೆಹರು ತಾರಾಲಯದಲ್ಲಿ ಚಂದ್ರಯಾನ -3’ ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಚಂದ್ರಯಾನ-3 ಲೈವ್ ಆರಂಭವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಮಲತಾ ಶುಭ ಹಾರೈಕೆ

ಇಂದು ನಿಜವಾಗಿಯೂ ಇಂದು ಭಾರತಕ್ಕೆ ಐತಿಹಾಸಿಕ ದಿನ. ಈ ದಿನಕ್ಕೊಸ್ಕರ ಇಡಿ ದೇಶ ಕಾಯುತ್ತಿದೆ. ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಇಡಿ ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದೆ ಸುಮಲತಾ ಹೇಳಿದರು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular