
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಮಾರ್ಕೆಟ್ ರಸ್ತೆಯಲ್ಲಿರುವ ವಿನಾಯಕ ಚಿತ್ರಮಂದಿರದ ಗೋಡೆ ಧಿಡೀರ್ ಕುಸಿದು ಬಿದ್ದಿದೆ. ಹಳೇ ಕಟ್ಟವಾಗಿದ್ದರಿಂದ ಶಿಥಿಲಗೊಂಡ ಗೋಡೆ ಕುಸಿದಿದೆ.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರೇಕ್ಷಕರಿಗೆ ಯಾವುದೇ ಅಪಾಯ ಆಗಿಲ್ಲ, ಆದರೆ ಥಿಯೇಟರ್ ಎದುರು ನಿಲ್ಲಿಸಿದ 7 ಬೈಕ್ ಗಳಿಗೆ ಹಾನಿಯಾಗಿದೆ. ಸೂಪರ್ ಸ್ಟಾರ್ ರಜನಿ ಕಾಂತ್ ಅಭಿನಯದ ‘ಜೈಲರ್’ ಚಿತ್ರ ಪ್ರದರ್ಶನದ ವೇಳೆ ಈ ಘಟನೆ ಸಂಭವಿಸಿದೆ. ರಜನಿ ಕಾಂತ್ ಅಭಿನಯದ ‘ಜೈಲರ್’ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ.

