ಐಶ್ವರ್ಯ ರೈ ಅವರಂಥ ಕಣ್ಣು ಪಡೆಯಲು ಮೀನು ತಿನ್ನಿ; ಟೀಕೆಗೆ ಗುರಿಯಾಯ್ತು ಬಿಜೆಪಿ ಸಚಿವರ ಈ ಹೇಳಿಕೆ….!

'For Eyes Like Aishwarya Rai, Eat Fish Daily': BJP Minister Sparks Row

ರಾಜಕೀಯ ವ್ಯಕ್ತಿಗಳು ಯಾವುದಾದರೂ ಒಂದನ್ನು ಹೋಲಿಕೆ ಮಾಡುವಾಗ ನಟಿಯರನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದು ಹೊಸದೇನಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಸುಂದರವಾದ ರಸ್ತೆಗಳನ್ನು ನಿರ್ಮಿಸುವ ಮಾತನಾಡುವಾಗ ಇದನ್ನು ಹಿರಿಯ ನಟಿ ಹೇಮಾ ಮಾಲಿನಿಯವರ ಕೆನ್ನೆಗೆ ಹೋಲಿಸಿದ್ದರು. ಅವರ ನುಣುಪಾದ ಕೆನ್ನೆಯಂತೆ ನಾವು ನಿರ್ಮಿಸುವ ರಸ್ತೆಗಳು ಇರುತ್ತವೆ ಎಂದಿದ್ದರು.

ಇದೀಗ ಮಹಾರಾಷ್ಟ್ರದ ಬಿಜೆಪಿ ಸಚಿವರೊಬ್ಬರು ಸುಂದರವಾದ ಕಣ್ಣುಗಳನ್ನು ಪಡೆಯಲು ಏನು ಮಾಡಬೇಕು ಎಂದು ಹೇಳಲು ಹೋಗಿ ಟೀಕೆಗೆ ಗುರಿಯಾಗಿದ್ದಾರೆ. ಹೌದು, ಸಚಿವ ವಿಜಯಕುಮಾರ್ ಗವಿತ್ ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಮೀನು ತಿನ್ನುವುದರ ಪ್ರಾಮುಖ್ಯತೆ ಮತ್ತು ಪ್ರಯೋಜನಗಳನ್ನು ವಿವರಿಸುವಾಗ ಮಾಜಿ ವಿಶ್ವ ಸುಂದರಿ, ಖ್ಯಾತ ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಅವರ ಉದಾಹರಣೆಯನ್ನು ನೀಡಿದ್ದಾರೆ.

ನಂದೂರಬಾರ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿಜಯ್ ಕುಮಾರ್ ಗವಿತ್, ಕರ್ನಾಟಕದ ಮಂಗಳೂರಿನವರಾದ ಐಶ್ವರ್ಯ ರೈ ನಿಯಮಿತವಾಗಿ ಮೀನು ತಿನ್ನುತ್ತಿದ್ದರು. ಹೀಗಾಗಿಯೇ ಅವರು ಸುಂದರವಾದ ಕಣ್ಣುಗಳನ್ನು ಹೊಂದಿದ್ದು, ನಿಮಗೂ ಸಹ ಇಂತಹ ಕಣ್ಣುಗಳನ್ನು ಹೊಂದಬೇಕೆಂಬ ಇಚ್ಛೆ ಇದ್ದರೆ ಮೀನನ್ನು ತಿನ್ನಿ ಎಂದಿದ್ದಾರೆ. ಅವರ ಈ ಹೇಳಿಕೆಯನ್ನು ವಿಪಕ್ಷಗಳು ಮಾತ್ರವಲ್ಲದೆ ಬಿಜೆಪಿ ನಾಯಕರೇ ಟೀಕಿಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read