HomeCrimeಬಾತ್ ರೂಮ್ ಗೆ ಹೋಗಿದ್ದ ಪತಿ; ಮನೆಗೆ ಬೀಗ ಹಾಕಿ ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ...!

ಬಾತ್ ರೂಮ್ ಗೆ ಹೋಗಿದ್ದ ಪತಿ; ಮನೆಗೆ ಬೀಗ ಹಾಕಿ ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ…!

ಬೆಂಗಳೂರು: ಪತಿ ಸ್ನಾನಕ್ಕೆಂದು ಬಾತ್ ರೂಮಿಗೆ ಹೋಗಿದ್ದ ವೇಳೆ ನವವಿವಾಹಿತೆ ಮನೆಗೆ ಬೀಗ ಹಾಕಿ ಪ್ರಿಯತಮನೊಂದಿಗೆ ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ರಮೇಶ್ ಎಂಬಾತ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಬೆಂಗಳೂರಿನ ಆರ್.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿಯನ್ನು ಪ್ರೀತಿಸಿ ಎರಡು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರಮೇಶ್ ಗೆ ಪತ್ನಿಯೇ ಮೋಸ ಮಾಡಿದ್ದಾಳೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎರಡು ದಿನಗಳ ಹಿಂದೆ ರಮೇಶ್ ಸ್ನಾನಕ್ಕೆಂದು ಬಾತ್ ರೂಮಿಗೆ ಹೋಗಿದ್ದನಂತೆ ಈ ವೇಳೆ ಪತ್ನಿ ಮನೆಗೆ ಲಾಕ್ ಮಾಡಿಕೊಂಡು ಹೋಗಿದ್ದು, ಪ್ರಿಯತಮನ ಬೈಕ್ ಏರಿ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ರಮೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular