HomeKarnatakaರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾವು

ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ : ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾವು

ಚಾಮರಾಜನಗರ : ಕಾಡಾನೆ ದಾಳಿಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದ್ದು, ಮಲೆ ಮಹಾದೇಶ್ವರ ಬೆಟ್ಟದಲ್ಲಿ ಭಕ್ತನೋರ್ವನನ್ನು ಆನೆ ತುಳಿದು ಸಾಯಿಸಿದೆ.

ಬೆಂಗಳೂರು ಮೂಲದ ಗೋವಿಂದರಾಜು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಗೋವಿಂದರಾಜು ಮತ್ತು ಆತನ ಗೆಳೆಯ ಲೋಕೇಶ್ ಇಬ್ಬರು ಮಲೆಮಹಾದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಪೂಜೆ ಸಲ್ಲಿಸಿ ನಾಗಮಲೆಗೆ ಹೋಗುತ್ತಿದ್ದರು. ರಾತ್ರಿ 11:30 ರ ವೇಳೆಗೆ ಕಾಡಾನೆ ದಾಳಿ ನಡೆಸಿದೆ.

ಆನೆ ದಾಳಿಗೆ ಸಿಲುಕಿ ಗೋವಿಂದರಾಜು ಸ್ಥಳದಲ್ಲೇ ಮೃತಪಟ್ಟಿದ್ರೆ, ಸ್ನೇಹಿತ ಲೋಕೇಶ್ ಪಾರಾಗಿದ್ದಾರೆ. ಘಟನೆ ಹಿನ್ನೆಲೆ ಸುತ್ತಮುತ್ತಲಿನ ಜನರು ಆತಂಕಕಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular