HomeKarnatakaBIG NEWS : ಇಂದು ವಿಜಯ್ ರಾಘವೇಂದ್ರ ಪತ್ನಿ ‘ಸ್ಪಂದನಾ’ ಉತ್ತರಕ್ರಿಯೆ ವಿಧಿವಿಧಾನ

BIG NEWS : ಇಂದು ವಿಜಯ್ ರಾಘವೇಂದ್ರ ಪತ್ನಿ ‘ಸ್ಪಂದನಾ’ ಉತ್ತರಕ್ರಿಯೆ ವಿಧಿವಿಧಾನ

ಬೆಂಗಳೂರು : ಸ್ಯಾಂಡಲ್ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಕಾರ್ಯ ನಡೆದಿದೆ.

ಈಡಿಗ ಪದ್ಧತಿಯಂತೆ 5 ನೇ ದಿನದ ಕಾರ್ಯ, ಅಸ್ತಿ ವಿಸರ್ಜನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಅಸ್ತಿ ವಿಸರ್ಜನೆಗೂ ಮುನ್ನ ವಿಜಯರಾಘವೇಂದ್ರ ಕುಟುಂಬಸ್ಥರು ಹಾಗೂ ಬಿ.ಕೆ. ಶಿವರಾಂ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ.

ಇಂದ ಬೆಳಿಗ್ಗೆ 8:00 ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನಡೆಯುತ್ತಿದೆ. ನಂತರ 11:30ರ ನಂತರ ಕೋದಂಡರಾಮಪುರದ ಯಂಗ್ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಭೋಜನ ಆರಂಭವಾಗಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಬಿಬಿಎಂಪಿ ಆಟದ ಮೈದಾನದಲ್ಲಿ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿದೆ. ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ವಿಐಪಿ- ಸಾರ್ವಜನಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿದೆ.
ಆಗಸ್ಟ್ 6ರಂದು ಭಾನುವಾರದಂದು ಹೃದಯಾಘಾತದಿಂದ ಸ್ಪಂದನಾ ವಿಧಿವಶರಾದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular