HomeKarnatakaBIG NEWS : ಶಿಕ್ಷಕರು-ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಕೇಂದ್ರ ಚು.ಆಯೋಗ ಸೂಚನೆ

BIG NEWS : ಶಿಕ್ಷಕರು-ಪದವೀಧರರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಕೇಂದ್ರ ಚು.ಆಯೋಗ ಸೂಚನೆ

ಬೆಂಗಳೂರು : ರಾಜೀನಾಮೆ ಮತ್ತು ನಿವೃತ್ತಿಯಿಂದ ತೆರವಾಗುತ್ತಿರುವ ವಿಧಾನಪರಿಷತ್ತಿನ ಕೆಲವು ಪದವಿಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.

ನೈಋತ್ಯ ಪದವಿಧರ ಕ್ಷೇತ್ರ ಆಯನೂರು ಮಂಜುನಾಥ್ ಅವರ ರಾಜೀನಾಮೆಯಿಂದ 19-4-2023 ರಿಂದ ತೆರವಾಗಿದ್ದು, ಈ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 21-06-2024 ರ ವರೆಗೆ ಇದೆ. ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶ್ರೀ ಪುಟ್ಟಣ್ಣ ಅವರ ರಾಜೀನಾಮೆಯಿಂದ 16-03-2023 ರಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆದಿಲ್ಲ. ಈ ಸ್ಥಾನದ ಅವಧಿ 11-11-2026ರ ವರೆಗೆ ಇದೆ.

21-06-2024 ಕ್ಕೆ ಈಶಾನ್ಯ ಪದವಿಧರ ಕ್ಷೇತ್ರದಿಂದ ಡಾ. ಚಂದ್ರಶೇಖರ ಬಿ. ಪಾಟೀಲ್, 21-06-2024 ಕ್ಕೆ ಬೆಂಗಳೂರು ಪದವಿಧರ ಕ್ಷೇತ್ರದಿಂದ ಶ್ರೀ ಎ. ದೇವೇಗೌಡ, 21-06-2024 ಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಡಾ. ವೈ.ಎ. ನಾರಾಯಣ ಸ್ವಾಮಿ, 21-06-2024 ಕ್ಕೆ ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಎಸ್.ಎಲ್. ಭೋಜೆಗೌಡ, 21-06-2024 ಕ್ಕೆ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಶ್ರೀ ಮರಿತಿಬ್ಬೇಗೌಡ ನಿವೃತ್ತಿಯಾಗುತ್ತಿದ್ದಾರೆ.ಮತದಾರರ ಪಟ್ಟಿ ಪರಿಷ್ಕರಣೆಗೆ ಸಾರ್ವಜನಿಕ ನೋಟೀಸ್ ಅನ್ನು 30-09-2023 ಪ್ರಕಟಣೆ ಮಾಡಬೇಕಾಗಿದೆ.ಫಾರಂ 18 ಅಥವಾ 19 ರಲ್ಲಿ ಅರ್ಜಿ ಸ್ವೀಕರಿಸಲು 06-11-2023 ಕಡೆಯ ದಿನವಾಗಿದೆ. ಮತದಾರರ ಕರಡು ಪ್ರತಿ ಪ್ರಕಟಿಸುವ ದಿನ 23-11-2023, ಮತದಾರರ ಪಟ್ಟಿ ಪ್ರಕಟಣೆ ದಿನ 23-11-2023, ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಲು 23-11-2023 ರಿಂದ 09-12-2023 ರ ವರೆಗೆ ಅವಕಾಶವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ನಿವಾರಿಸಿ ಪೂರಕ ಪ್ರತಿಗಳನ್ನು ಸಿದ್ಧಪಡಿಸಿ ಪ್ರಕಟಿಸಲು 25-12-2023 ಹಾಗೂ ಮತದಾರರ ಅಂತಿಮ ಪಟ್ಟಿ ಪ್ರಕಟಿಸುವ ದಿನಾಂಕ 30-12-2023 ಆಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಚುನಾವಣಾ ಆಯೋಗದ ಸಮಗ್ರ ನಿರ್ದೇಶಗಳ ಅನ್ವಯ ಮಾಡತಕ್ಕದ್ದು ಎಂದು ಸೂಚಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular