ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮೊದಲ ಬಾರಿಗೆ ಕೌನ್ಸೆಲಿಂಗ್ ಮೂಲಕ ಅಧಿಕಾರಿಗಳು, ಸಿಬ್ಬಂದಿಯನ್ನು ನಾಲ್ಕು ನಿಗಮಗಳಿಗೆ ಶಾಶ್ವತವಾಗಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸಾಂಕೇತಿಕವಾಗಿ ತಾಂತ್ರಿಕ ವಿಭಾಗದ ಮೇಲ್ವಿಚಾರಕ ಸಿಬ್ಬಂದಿಗೆ ಹಂಚಿಕೆ ಪತ್ರ ವಿತರಿಸಿದ್ದಾರೆ. ಕೌನ್ಸೆಲಿಂಗ್ ಮೂಲಕ ದರ್ಜೆ -1 ಕಿರಿಯ ಅಧಿಕಾರಿಗಳು, ದರ್ಜೆ -2 ಅಧಿಕಾರಿಗಳು, ದರ್ಜೆ -3 ಮೇಲ್ವಿಚಾರಕರನ್ನು 4 ನಿಗಮಗಳಿಗೆ ಶಾಶ್ವತವಾಗಿ ಹಂಚಿಕೆ ಮಾಡಲಾಗಿದೆ.
4 ಸಾರಿಗೆ ನಿಗಮಗಳ 2525 ನೌಕರರಲ್ಲಿ 2380 ಸಿಬ್ಬಂದಿಯನ್ನು ಅವರು ಬಯಸಿದ ನಿಗಮಗಳಿಗೆ ಹಂಚಿಕೆ ಮಾಡಲಾಗಿದ್ದು, ಉಳಿದ 145 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇರ ಕೌನ್ಸೆಲಿಂಗ್ ಮೂಲಕ ಬಾಹ್ಯ ಒತ್ತಡಕ್ಕೆ ಆಸ್ಪದ ಇಲ್ಲದಂತೆ ಪಾರದರ್ಶಕ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.