HomeAutoBREAKING : ಸ್ವಂತ ಕಾರು ಇದ್ದವರಿಗೆ ‘BPL’ ಕಾರ್ಡ್ ರದ್ದು : ಸಚಿವ K.H ಮುನಿಯಪ್ಪ...

BREAKING : ಸ್ವಂತ ಕಾರು ಇದ್ದವರಿಗೆ ‘BPL’ ಕಾರ್ಡ್ ರದ್ದು : ಸಚಿವ K.H ಮುನಿಯಪ್ಪ ಮಹತ್ವದ ಘೋಷಣೆ

ಬೆಂಗಳೂರು : ಸ್ವಂತ ಕಾರು ಇರುವವರಿಗೆ ‘BPL’ ಕಾರ್ಡ್ ಇಲ್ಲ ಎಂದು ಆಹಾರ ಸಚಿವ K.H ಮುನಿಯಪ್ಪಮಹತ್ವದ ಘೋಷಣೆ ಮಾಡಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಆಹಾರ ಸಚಿವರು ಸ್ವಂತ ಕಾರು ಇರುವವರಿಗೆ ‘BPL’ ಕಾರ್ಡ್ ಇಲ್ಲ,  ಸ್ವಂತ ಕಾರು ಇರುವವರಿಗೆ ‘BPL’ ಕಾರ್ಡ್ ನೀಡದಿರಲು ಚಿಂತನೆ ನಡೆಸಲಾಗಿದೆ ಎಂದು K.H ಮುನಿಯಪ್ಪಮಹತ್ವದ ಘೋಷಣೆ ಮಾಡಿದ್ದಾರೆ.  ವೈಟ್ ಬೋರ್ಡ್ ಕಾರು ಹೊಂದಿರುವ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತದೆ, ಯೆಲ್ಲೋ ಬೋರ್ಡ್ ಕಾರು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದನ್ನು ವಾಪಸ್ಸು ಪಡೆಯಲು ಚಿಂತನೆ ನಡೆಸಲಾಗುತ್ತಿದೆ ಎಂದರು.ಅದೇ ರೀತಿ ಹೊಸದಾಗಿ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು  ಸಚಿವ K.H ಮುನಿಯಪ್ಪ ಹೇಳಿದರು. ನೀತಿ ಸಂಹಿತಿ ಜಾರಿ ಹಿನ್ನೆಲೆ ರೇಷನ್ ಕಾರ್ಡ್ ವಿತರಣೆ ಸ್ಥಗಿತವಾಗಿತ್ತು. ಈಗ ಹೊಸ ಪಡಿತರ ಕಾರ್ಡ್ ವಿತರಣೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಜೊತೆಗೆ ಪಡಿತರಕಾರ್ಡ್ ಗೆ ಕೂಡಹೊಸ ಸದಸ್ಯರ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದರು.

ಪಡಿತರದಾರರಿಗೆ ಸೆಪ್ಟೆಂಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಆಂಧ್ರ ಹಾಗೂ ತೆಲಂಗಾಣ ಅಕ್ಕಿ ನೀಡಲು ಮುಂದಾಗಿದೆ, ಒಂದು ವಾರದಲ್ಲಿ ಅಲ್ಲಿನ ಅಧಿಕಾರಿಗಳು ಅಕ್ಕಿ ನೀಡುವ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ . ಆಹಾರ ನಿಗಮದ ದರದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಿದ್ದೇವೆ, ಕೆಜಿಗೆ 34 ರೂ ದರದಲ್ಲಿ ಅಕ್ಕಿ ನೀಡುವಂತೆ ಕೇಳಿದ್ದೇವೆ. ಸದ್ಯ, 5 ಕೆಜಿ ಅಕ್ಕಿ ಬದಲಾಗಿ ಜನರಿಗೆ ಹಣ ಹಾಕುತ್ತಿದ್ದೇವೆ, ಸೆಪ್ಟೆಂಬರ್ ತಿಂಗಳಿನಿಂದ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.5 ಕೆಜಿ ಅಕ್ಕಿ ಬದಲು ಇದುವರೆಗೆ 1 ಕೋಟಿ ಕುಟುಂಬಕ್ಕೆ 556 ಕೋಟಿ ಹಣ ಜಮಾ ಮಾಡಲಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular