HomeKarnatakaLalbagh Flower Show 2023 : ನಾಳೆಯಿಂದ ಲಾಲ್ ಬಾಗ್​'ನಲ್ಲಿ 'ಫ್ಲವರ್ ಶೋ' ಆರಂಭ..ಈ ಬಾರಿಯ...

Lalbagh Flower Show 2023 : ನಾಳೆಯಿಂದ ಲಾಲ್ ಬಾಗ್​’ನಲ್ಲಿ ‘ಫ್ಲವರ್ ಶೋ’ ಆರಂಭ..ಈ ಬಾರಿಯ ವಿಶೇಷತೆ ಏನು ಗೊತ್ತಾ..?

ಬೆಂಗಳೂರು : ನಾಳೆಯಿಂದ ಸಸ್ಯಕಾಶಿ ಲಾಲ್ ಬಾಗ್​’ನಲ್ಲಿ  ಫ್ಲವರ್ ಶೋ ಆರಂಭವಾಗಲಿದ್ದು,  ನಾಳೆ  ಸಂಜೆ 6 ಗಂಟೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಆ.4ರಿಂದ 15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ವಿವಿಧ ರೀತಿಯ ಫಲಪುಷ್ಪಗಳು ಪುಷ್ಪ ಪ್ರಿಯರ ಗಮನ ಸೆಳೆಯಲಿದೆ. ತೋಟಗಾರಿಕೆ ಇಲಾಖೆ, ನಗರದ ವಿವಿಧ ಲಾಭರಹಿತ ಸಂಸ್ಥೆಗಳ ಸಹಯೋಗದೊಂದಿಗೆ ಲಾಲ್ ಬಾಗ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದು, ವಿಶೇಷ ಅಂದರೆ ಈ ಬಾರಿ 214 ನೇ ಫಲಪುಷ್ಪ ಪ್ರದರ್ಶನ ನೋಡುಗರ ಮನ ಸೂರೆಗೊಳಿಸಲಿದೆ.

76 ನೇ ಸ್ವತಂತ್ರ ಮಹೋತ್ಸವದ ಹಿನ್ನೆಲೆಯಲ್ಲಿ 214 ನೇ ಫ್ಲವರ್ ಶೋ ಆಯೋಜನೆ ಮಾಡಲಾಗಿದ್ದು, ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ. ಫ್ಲವರ್ ಶೋ ಬರುವವರಿಗೆ ಎಂಟ್ರಿ ಫೀಜ್ ದೊಡ್ಡವರಿಗೆ 70 ರೂ ಹಾಗೂ ಮಕ್ಕಳಿಗೆ 30 ರುಪಾಯಿ ನಿಗದಿ ಮಾಡಲಾಗಿದೆ. ಈ ಬಾರಿ 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆಯಿದ್ದು. ಒಟ್ಟು 10 ದಿನಗಳ ಕಾಲ ಫ್ಲವರ್ ಶೋ ಇರಲಿದೆ. ಶಾಲಾ ಮಕ್ಕಳಿಗೆ ಪ್ರವೇಶ ಉಚಿತವಾಗಿರಲಿದೆ, 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular