HomeKarnatakaGruha Lakshmi Scheme : ‘ಗೃಹಲಕ್ಷ್ಮಿ’ ನೋಂದಣಿಗೆ ಹಣ ವಸೂಲಿ : ಗ್ರಾಮ ಒನ್ ಕೇಂದ್ರ...

Gruha Lakshmi Scheme : ‘ಗೃಹಲಕ್ಷ್ಮಿ’ ನೋಂದಣಿಗೆ ಹಣ ವಸೂಲಿ : ಗ್ರಾಮ ಒನ್ ಕೇಂದ್ರ ಸೀಜ್

ಚಿಕ್ಕೋಡಿ : ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜನರಿಂದ ಹಣ ವಸೂಲಿ ಮಾಡಿದ ಆರೋಪದ ಹಿನ್ನೆಲೆ ಗ್ರಾಮ ಒನ್ ಕಚೇರಿಯನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಕೇಂದ್ರವನ್ನು ಸಿಬ್ಬಂದಿಗಳು  ಕಚೇರಿ ಸೀಜ್ ಮಾಡಿ ಲಾಗಿನ್ ಐಡಿ ಬ್ಲಾಕ್ ಮಾಡಿದ್ದಾರೆ.   ರಾಜ್ಯ ಸರ್ಕಾರ, ಸಚಿವರುಗಳ ಆದೇಶಕ್ಕೂ ಡೋಂಟ್ ಕೇರ್ ಎನ್ನದೇ ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆಗೆ ಸಿಬ್ಬಂದಿಗಳು ಹಣ ಪಡೆಯುತ್ತಿರುವ ಆರೋಪಗಳು ಸಾಲು ಸಾಲಾಗಿ ಕೇಳಿಬರುತ್ತಿದೆ.ಇದರ ನಡುವೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರೂರಲ್ಲೇ ಗ್ರಾಮ ಒನ್ ಸಿಬ್ಬಂದಿ ಧಮ್ಕಿ ಹಾಕಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ನಡೆದಿತ್ತು.

ಹಣ ತೆಗೆದುಕೊಂಡು ಸಿಬ್ಬಂದಿ ಧಮ್ಕಿ ಹಾಕಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಗ್ರಾಮ ಒನ್ ಕಚೇರಿಯನ್ನ ಅಧಿಕಾರಿಗಳು ಸೀಜ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular