
ಕೊತ್ತನೂರಿನ ಗೆದ್ದಲಹಳ್ಳಿ ನಿವಾಸಿ ಜಾನ್ ವೆಸ್ಲಿ(77) ಎಂಬುವವರು ವಂಚನೆಗೊಳಗಾದ ವ್ಯಕ್ತಿ. ಜಾನ್ ಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ನಿಮ್ಮ ಕೆವೈಸಿ ಅಪ್ ಡೇಟ್ ಆಗಬೇಕು. ಇಲ್ಲವಾದಲ್ಲಿ ನಿಮ್ಮ ಅಕೌಂಡ್ ಬ್ಲಾಕ್ ಆಗುತ್ತೆ ಎಂದು ಹೆದರಿಸಿದ್ದಾನೆ. ಈ ನಂಬರ್‌ಗೆ ಕರೆ ಮಾಡಿ ಎಂದು ಒಂದು ಮೊಬೈಲ್ ಸಂಖ್ಯೆಯನ್ನೂ ನೀಡಿದ್ದಾನೆ, ಅಂತೆಯೇ ಜಾನ್ ಆ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಜಾನ್ ಒಟಿಪಿ ಸಂಖ್ಯೆ ಪಡೆದುಕೊಂಡು ಜಾನ್ ಅವರ ಬ್ಯಾಂಕ್ ಖಾತೆಯಿಂದ .3.50 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.
ಈ ಸಂಬಂಧ ಪೂರ್ವ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

