
ಮಲ್ಲಪ್ಪ ಶರಣಪ್ಪ ಕರೆಪನೂರ್ (25) ಎಂಬಾತ ಬಸವಕಲ್ಯಾಣ ತಾಲೂಕಿನ ಧನ್ನೂರ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿರುವ ನೀರಿನ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ಧಾರಾಕಾರವಾಗಿ ಮಳೆ ಸುರಿದ ಹಿನ್ನೆಲೆ ಹಳ್ಳದಲ್ಲಿ ನೀರಿನ ಆರ್ಭಟ ಜೋರಾಗಿತ್ತು, ಆದರೆ ಇದನ್ನು ಲೆಕ್ಕಿಸದೇ ಹಳ್ಳ ದಾಟಲು ಹೋಗಿ ಆತ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾನೆ, ಸದ್ಯ ಯುವಕನ ಮೃತದೇಹ ಪತ್ತೆ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

