HomeKarnatakaGruha Jyoti Scheme : ನೀವಿನ್ನೂ `ಗೃಹಜ್ಯೋತಿ’ಗೆ ಅರ್ಜಿ ಸಲ್ಲಿಸಿಲ್ವಾ? ಹಾಗಾದ್ರೆ ಆಗಸ್ಟ್ ನಲ್ಲಿ `ಕರೆಂಟ್...

Gruha Jyoti Scheme : ನೀವಿನ್ನೂ `ಗೃಹಜ್ಯೋತಿ’ಗೆ ಅರ್ಜಿ ಸಲ್ಲಿಸಿಲ್ವಾ? ಹಾಗಾದ್ರೆ ಆಗಸ್ಟ್ ನಲ್ಲಿ `ಕರೆಂಟ್ ಬಿಲ್’ ಕಟ್ಟಲು ರೆಡಿಯಾಗಿ!

ಬೆಂಗಳೂರು : ‘ಗೃಹಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಡೆಡ್ ಲೈನ್ ಇಲ್ಲ, ಆದರೆ ಅರ್ಜಿ ಸಲ್ಲಿಸುವುದ ಕಡ್ಡಾಯವಾಗಿದೆ ಜುಲೈ 27 ರೊಳಗೆ ನೀವು ಅರ್ಜಿ ಸಲ್ಲಿಸಿಲ್ಲ ಅಂದ್ರೆ ನಿಮಗೆ ಉಚಿತ ವಿದ್ಯುತ್ ಸಿಗಲ್ಲ. ಜುಲೈ ತಿಂಗಳ ಬಿಲ್ ಅನ್ನು ಆಗಸ್ಟ್ ತಿಂಗಳಲ್ಲಿ ಕಟ್ಟಲೇಬೇಕು.

ಗೃಹಜ್ಯೋತಿ ನೋಂದಣಿಗೆ ಕೊನೆ ದಿನಾಂಕ ಇಲ್ಲವಾದರೂ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬರುವ ಜುಲೈ ತಿಂಗಳ ವಿದ್ಯುತ್ ಬಳಕೆಯ ಬಿಲ್ ಝೀರೋ ಬರಬೇಕಾದರೆ ಅದಕ್ಕಿಂತ ಮೊದಲು ನೋಂದಣಿ ಮಾಡಿಕೊಳ್ಳಬೇಕು. ಜುಲೈ 26 ಅಥವಾ 27 ರ ಒಳಗೆ ಅಂತಿಮ ಗಡುವು ನೀಡಲಾಗಿದೆ. ಈ ದಿನಾಂಕದೊಳಗೆ ನೀವು ನೋಂದಣಿ ಮಾಡದಿದ್ದರೆ ಎಂದಿನಂತೆ ರೆಗ್ಯೂಲರ್ ಬಿಲ್ ಬರುತ್ತದೆ. ಆದ್ದರಿಂದ ಜುಲೈ 27 ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗ್ರಾಹಕರು ಜುಲೈ 27 ರೊಳಗೆ ಸೇವಾಸಿಂಧುವಿನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ದಿನಾಂಕದೊಳಗೆ ನೋಂದಾಯಿಸಲು ವಿಫಲವಾದರೆ ಅವರನ್ನು ಜುಲೈ ತಿಂಗಳ ಯೋಜನೆಯಿಂದ ಹೊರಗಿಡಲಾಗುತ್ತದೆ, ಬಳಿಕ ಅವರನ್ನು ಆಗಸ್ಟ್ ನಿಂದ ಪ್ರಾರಂಭವಾಗುವ ಯೋಜನೆಗೆ ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇಲ್ಲ,

ಜೂನ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳಿನಿಂದ ಉಚಿತ ವಿದ್ಯುತ್ ನೀಡಲಾಗುತ್ತದೆ. , ಜುಲೈ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದ್ರೆ ಆಗಸ್ಟ್ ತಿಂಗಳಿನಿಂದ ಉಚಿತ ವಿದ್ಯುತ್ ನೀಡಲಾಗುತ್ತದೆ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೆ ಉಚಿತ ವಿದ್ಯುತ್ ನೀಡುವುದಿಲ್ಲ, ಬಾಕಿ ಹಣವನ್ನು ಕಟ್ಟಲೇಬೇಕು ಎಂದು ಇಂಧನ ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular