HomeKarnatakaBIG NEWS: ವರುಣಾರ್ಭಟಕ್ಕೆ ಭೀಕರ ಅಪಘಾತ; ಹೇಮಾವತಿ ನದಿಗೆ ಉರುಳಿಬಿದ್ದ ಎರಡು ಕಾರು

BIG NEWS: ವರುಣಾರ್ಭಟಕ್ಕೆ ಭೀಕರ ಅಪಘಾತ; ಹೇಮಾವತಿ ನದಿಗೆ ಉರುಳಿಬಿದ್ದ ಎರಡು ಕಾರು

ಚಿಕ್ಕಮಗಳೂರು: ಚಿಕ್ಕಮಗಳೂರಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ವರುಣಾರ್ಭಟದ ನಡುವೆ ಅಪಘಾತಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಭೀಕರ ಅಪಘಾತದಲ್ಲಿ ಎರಡು ಕಾರುಗಳು ಹೇಮಾವತಿ ನದಿಗೆ ಉರುಳಿಬಿದ್ದ ಘಟನೆ ನಡೆದಿದೆ.

ಚಾಲಕರ ನಿಯಂತ್ರಣ ತಪ್ಪಿದ ಕಾರುಗಳು ಬಣಕಲ್ ಸಮೀಪದ ಹೇಮಾವತಿ ನದಿಗೆ ಉರುಳಿ ಬಿದ್ದಿವೆ. ಸ್ವಿಫ್ಟ್ ಹಾಗೂ ಇನ್ನೋವಾ ಕಾರುಗಳು ಅಪಘಾತಕ್ಕೀಡಾಗಿ ನದಿಗೆ ಬಿದ್ದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೋವಾ ಕಾರು ಪುತ್ತೂರಿನಿಂದ ಚಿಕ್ಕಮಗಳೂರಿನ ಕಡೆಗೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ. ಎರಡೂ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular