ಬೆಂಗಳೂರು: ಹೆತ್ತ ತಂದೆ-ತಾಯಿಯನ್ನೇ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿ ಮಗನನ್ನು ಬೆಂಗಳೂರು ಪೊಲೀಸರು ಬಂದಿಸಿದ್ದಾರೆ.
ಬಂಧಿತ ಆರೋಪಿ ಶರತ್ ಎಂದು ಗುರುತಿಸಲಾಗಿದೆ. ಕುಡಿದು ಬಂದು ತಂದೆ ಭಾಸ್ಕರ್ ಹಾಗೂ ತಾಯಿ ಶಾಂತಾಳನ್ನು ರಾಡ್ ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಕೃತ್ಯದ ಬಳಿಕ ಪರಾರಿಯಾಗಿದ್ದ. ಪಕ್ಕದ ಮನೆಯವರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು.
ಬೆಂಗಳೂರಿನ ಕೋಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 17ರಂದು ಈ ಘಟನೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಕೋಡಿಗೆಹಳ್ಳಿ ಪೊಲೀಸರು ಇದೀಗ ಆರೋಪಿ ಶರತ್ ನನ್ನು ಬಂಧಿಸಿದ್ದಾರೆ.