HomeLatest NewsBIG BREAKING : ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಇನ್ನಿಲ್ಲ |S. L....

BIG BREAKING : ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಇನ್ನಿಲ್ಲ |S. L. Bhyrappa No More

ಬೆಂಗಳೂರು :  ಪದ್ಮಭೂಷಣ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ (94) ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಎಸ್.ಎಸ್ ಭೈರಪ್ಪ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ (ಎಸ್.ಎಲ್ ಭೈರಪ್ಪ) ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು ೨೦೨೩ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ೨೬-೦೭-೧೯೩೪ ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರದಲ್ಲೂ ಅವರ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯ ಧೀಮಂತಿಕೆಯನ್ನು ಮೈಗೂಡಿಸಿ ಕೊಂಡರು. ಶಾಲಾ ದಾಖಲೆಗಳ ಪ್ರಕಾರ ಅವರ ಜನ್ಮದಿನ ೨೦-೦೮-೧೯೩೧ ಎಂದು ಅವರು ತಮ್ಮ ಆತ್ಮಕಥೆ ಭಿತ್ತಿಯಲ್ಲಿ ಹೇಳಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್.ಎಲ್ ಭೈರಪ್ಪ ಕಾದಂಬರಿಗಳು

  1. ಭೀಮಕಾಯ
  2. ಬೆಳಕು ಮೂಡಿತು
  3. ಧರ್ಮಶ್ರೀ – (೧೯೬೧)
  4. ದೂರ ಸರಿದರು- (೧೯೬೨)
  5. ಮತದಾನ – (೧೯೬೫)
  6. ವಂಶವೃಕ್ಷ- (೧೯೬೫)
  7. ಜಲಪಾತ (ಕಾದಂಬರಿ)- (೧೯೬೭)
  8. ನಾಯಿ ನೆರಳು- (೧೯೬೮)
  9. ತಬ್ಬಲಿಯು ನೀನಾದೆ ಮಗನೆ-(೧೯೬೮)
  10. ಗೃಹಭಂಗ-(೧೯೭೦)
  11. ನಿರಾಕರಣ-(೧೯೭೧)
  12. ಗ್ರಹಣ-(೧೯೭೨)
  13. ದಾಟು -(೧೯೭೩)
  14. ಅನ್ವೇಷಣ-(೧೯೭೬)
  15. ಪರ್ವ-(೧೯೭೯)
  16. ನೆಲೆ -(೧೯೮೩)
  17. ಸಾಕ್ಷಿ -(೧೯೮೬)
  18. ಅಂಚು-(೧೯೯೦)
  19. ತಂತು -(೧೯೯೩)
  20. ಸಾರ್ಥ-(೧೯೯೮)
  21. ಮಂದ್ರ-(೨೦೦೧)
  22. ಆವರಣ-(೨೦೦೭)
  23. ಕವಲು – (೨೦೧೦)
  24. ಯಾನ – (೨೦೧೪)
  25. ಉತ್ತರಕಾಂಡ-(೨೦೧೭)

ಆತ್ಮ ಚರಿತ್ರೆ
• ಭಿತ್ತಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular