ಉಡುಪಿ : ಜುಲೈ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದಿರುವ ಸ್ನಾತಕೋತ್ತರ ಕಾರ್ಯಕ್ರಮಗಳ ವಾರ್ಷಿಕ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ ಆಗಸ್ಟ್ 14 ಮತ್ತು ರೂ. 200 ದಂಡ ಶುಲ್ಕದೊಂದಿಗೆ ಆಗಸ್ಟ್ 24 ಕೊನೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2013-14, 2014-15 ಮತ್ತು 2018-2019 ರಿಂದ 2021-22 ನೇ ಶೈಕ್ಷಣಿಕ ಸಾಲಿನವರೆಗೆ (ಜುಲೈ/ಜನವರಿ ಆವೃತ್ತಿ) ಹಾಗೂ 2022-2023ನೇ ಶೈಕ್ಷಣಿಕ ಸಾಲಿನಲ್ಲಿ (ಜುಲೈ/ಜನವರಿ ಆವೃತ್ತಿ) ಪ್ರವೇಶಾತಿ ಪಡೆದಿರುವ ಸ್ನಾತಕ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳ ವಾರ್ಷಿಕ ವಿದ್ಯಾರ್ಥಿಗಳು, ಪರೀಕ್ಷೆ ತೆಗೆದುಕೊಂಡಿಲ್ಲದ ಮತ್ತು ಅನುತ್ತೀರ್ಣವಾಗಿರುವ ಪ್ರಥಮ, ದ್ವಿತೀಯ ಮತ್ತು ತೃತೀಯ ಬಿ.ಎ/ಬಿ.ಕಾಂ ಮತ್ತು ಪ್ರಥಮ ಹಾಗೂ ಅಂತಿಮ ಎಂ.ಎ, ಎಂ.ಕಾಂ.., ಬಿ.ಲಿಬ್.ಐ.ಸ್ಸಿ ವಿದ್ಯಾರ್ಥಿಗಳಿಗೆ ಮತ್ತು 2022-2023 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದಿರುವ ಸ್ನಾತಕೋತ್ತರ ಕಾರ್ಯಕ್ರಮಗಳ ವಾರ್ಷಿಕ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ ಆಗಸ್ಟ್ 14 ಮತ್ತು ರೂ. 200 ದಂಡ ಶುಲ್ಕದೊಂದಿಗೆ ಆಗಸ್ಟ್ 24 ಕೊನೆಯ ದಿನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸದರಿ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ 4 ರಿಂದ ಪರೀಕ್ಷೆಗಳು ಪ್ರಾರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ವಿವಿಯ ವೆಬ್ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮುಕ್ತ ವಿಶ್ವವಿದ್ಯಾನಿಲಯ ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.