
ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪ್ರಮುಖ ದಾಖಲೆಯಾಗಿವೆ. ಎಲ್ಲಾ ಸರ್ಕಾರಿ ಕೆಲಸಗಳು ಸೇರಿದಂತೆ ಹಣಕಾಸಿನ ವಿಷಯಗಳಿಗೆ ಬಳಸಲಾಗುತ್ತದೆ. ಎರಡೂ ದಾಖಲೆಗಳನ್ನು ಲಿಂಕ್ ಮಾಡುವುದು ಮುಖ್ಯವಾಗಿದೆ. ಆಧಾರ್ ಅನ್ನು ಪ್ಯಾನ್ನೊಂದಿಗೆ ಎಸ್ಎಂಎಸ್ ಮಾಡುವ ಮೂಲಕವೂ ಲಿಂಕ್ ಮಾಡಬಹುದು.
ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಹೇಗೆ?
ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ 2 ರೀತಿಯಲ್ಲಿ ಲಿಂಕ್ ಮಾಡಬಹುದು. ಇ-ಫೈಲಿಂಗ್ ಪೋರ್ಟಲ್ https://incometaxindiaefiling.gov.in ಮೂಲಕ ಪ್ಯಾನ್ ಅನ್ನು ಲಿಂಕ್ ಮಾಡುವುದು ಮೊದಲ ವಿಧಾನವಾಗಿದೆ. ಮತ್ತೊಂದು SMS ವೈಶಿಷ್ಟ್ಯವನ್ನು ಬಳಸುವುದು.
ಎಸ್ಎಂಎಸ್ ಮೂಲಕ ಆಧಾರ್ ಪ್ಯಾನ್ ಲಿಂಕ್
UIDPAN ಸ್ವರೂಪದಲ್ಲಿ ಸಂದೇಶವನ್ನು ಟೈಪ್ ಮಾಡಬೇಕು. ಉದಾಹರಣೆಗೆ ಮೊದಲು ಆಧಾರ್ ನಂಬರ್ ಅನ್ನು ನಮೂಸದಿಸಿ, ಬಳಿಕ ಪ್ಯಾಕ್ ಕಾರ್ಡ್ ನಂಬರ್ ಅನ್ನು ಬರೆಯಬೇಕು.
ಇದರ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 56161 ಅಥವಾ 567678 ಗೆ ಸಂದೇಶಗಳನ್ನು ಕಳುಹಿಸಬೇಕು.
ಬಳಿಕ ನಿಮ್ಮ ಆಧಾರ್ ಅನ್ನು ಪ್ಯಾನ್ಗೆ ಲಿಂಕ್ ಮಾಡುವ ಬಗ್ಗೆ ನೀವು ದೃಡೀಕರಣ ಸಂದೇಶವನ್ನು ಪಡೆಯುತ್ತೀರಿ.