
ಕೋಲಾರದ ಚಿಟ್ನಹಳ್ಳಿ, ಶೆಟ್ಟಿಮಾದಮಂಗಲ, ಮದನಹಳ್ಳಿ ಕ್ರಾಸ್ ಬಳಿಯ ಕ್ಲಿನಿಕ್, ಗೋಕುಲ್ ಕ್ಲಿನಿಕ್, ವೆಂಕಟೇಶ್ವರ ಕ್ಲಿನಿಕ್, ಆನಂದ್ ಕ್ಲಿನಿಕ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಲ್ಲಿನ ವೈದ್ಯರು, ಸಿಬ್ಬಂದಿಗಳು ಸಂಬಂಧಿಸಿದ ದಾಖಲೆಗಳನ್ನು ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಕ್ಲಿನಿಕ್ ಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ.
ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

