HomeKarnatakaBIG NEWS: ಕಾಶ್ಮೀರದಿಂದ-ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ; ವಿಪಕ್ಷ ನಾಯಕರ ಸಭೆಗೆ ಯತ್ನಾಳ್ ಕಿಡಿ

BIG NEWS: ಕಾಶ್ಮೀರದಿಂದ-ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ; ವಿಪಕ್ಷ ನಾಯಕರ ಸಭೆಗೆ ಯತ್ನಾಳ್ ಕಿಡಿ

ಬೆಂಗಳೂರು: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆ ಬಗ್ಗೆ ಬಿಜೆಪಿ ನಾಯಕರು ಸಹಜವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲಿಯೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕಾಶ್ಮೀರದಿಂದ-ಕನ್ಯಾಕುಮಾರಿವರೆಗಿನ ದರೋಡೆಕೋರರೆಲ್ಲರೂ ಒಂದಾಗುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಯತ್ನಾಳ್, ಕಾಶ್ಮೀರದಿಂದ-ಕನ್ಯಾಕುಮಾರಿವರೆಗಿನ ದರೋಡೆಕೋರರು ಒಟ್ಟಾಗಿ ಸೇರುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಲು ಒಗ್ಗೂಡುತ್ತಿದ್ದಾರೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಜಾಮೀನು ಮೇಲೆ ಇರುವ ಎಲ್ಲಾ ಕುಟುಂಬಗಳು ಒಟ್ಟಿಗೆ ಸೇರಿವೆ. ಮತ್ತೆ ನರೇಂದ್ರ ಮೋದಿ ಬಂದ್ರೆ ಜೈಲೇ ಗತಿ ಎಂಬುದು ಅವರಿಗೆ ಗೊತ್ತಾಗಿದೆ. ಹಾಗಾಗಿ ಎಲ್ಲಾ ದರೋಡೆಕೋರರು ಒಟ್ಟಿಗೆ ಸೇರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular