ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿ ನಿಟ್ಟಿನಲ್ಲಿ ಇಂದಿನಿಂದ ರಾಜಧಾನಿ ಬೆಂಗಳೂರಿನಲ್ಲಿ 2 ದಿನಗಳ ಕಾಲ ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆ ನಡೆಯಲಿದ್ದು, ಎಲ್ಲಾ ವಿಪಕ್ಷ ನಾಯಕರಿಗೆ ಸ್ವಾಗತ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರನ್ನು ಮಣಿಸಲು ವಿಪಕ್ಷ ನಾಯಕರು ಒಗ್ಗಟ್ಟಿನ ಮಂತ್ರ ಪಠಿಸುತ್ತಿದ್ದು, ಈ ನಿಟ್ಟಿನಲ್ಲಿ ಮಹಾ ಮೈತ್ರಿಕೂಟ-ಮಹಾಘಟಬಂಧನ್ ಸಭೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಭ್ರಷ್ಟ ಪ್ರಜಾಪ್ರಭುತ್ವದ ವಿರುದ್ಧ ಎಲ್ಲರೂ ಒಂದಾಗುತ್ತಿದ್ದಾರೆ. ಸರ್ವಾಧಿಕಾರಿ, ಕೋಮುವಾದಿ ವಿರುದ್ಧ ಹೋರಾಟ ನಡೆಸಲಾಗುವುದು. ಎಲ್ಲಾ ವಿಪಕ್ಷ ನಾಯಕರಿಗೂ ಸ್ವಾಗತ ಎಂದು ಹೇಳಿದ್ದಾರೆ.
ಶಾಂತಿಯುತ ಸೌಹಾರ್ದದ ತೋಟದಲ್ಲಿ ಬಿತ್ತಿದ ಬೀಜಗಳು ನಮ್ಮ ಸಂವಿಧಾನದಲ್ಲಿ ಫಲ ನೀಡಲಿ, ಜಾತ್ಯಾತೀತ, ಸಮಾಜವಾದಿ ಮೌಲ್ಯ ಸ್ಥಾಪಿಸುವಂತಾಗಲಿ ಎಂದು ತಿಳಿಸಿದ್ದಾರೆ.