HomeInternationalWatch | ಅತ್ಯಂತ ಅಪರೂಪದ ದೈತ್ಯ ಮೀನನ್ನು ಪತ್ತೆ ಮಾಡಿದ ಡೈವರ್ಸ್

Watch | ಅತ್ಯಂತ ಅಪರೂಪದ ದೈತ್ಯ ಮೀನನ್ನು ಪತ್ತೆ ಮಾಡಿದ ಡೈವರ್ಸ್

ತೈವಾನ್​ನಲ್ಲಿ ಸ್ಕೂಬಾ ಡೈವಿಂಗ್​ ಮಾಡುತ್ತಿದ್ದ ಗುಂಪೊಂದು ದೈತ್ಯ ಓರ್​ ಫಿಶ್​ಗೆ ಮುಖಾಮುಖಿಯಾಗಿದ್ದಾರೆ. ಸಮುದ್ರದ ತಳದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುವ ಈ ಪ್ರಬೇಧದ ಜೀವಿಯು ಭೂಕಂಪದ ಸಂಕೇತ ಎಂದು ಹೇಳಲಾಗುತ್ತೆ. ಸದ್ಯ ಈ ಅಪರೂಪದ ಘಟನೆಯು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಆದರೆ ಇಲ್ಲಿ ಆತಂಕಕ್ಕೆ ಕಾರಣವಾದ ವಿಚಾರ ಏನಂದ್ರೆ ಈ ಸಸ್ತನಿಯ ದೇಹದ ಮೇಲೆ ನಿಗೂಢ ರಂಧ್ರಗಳು ಕಾಣಿಸಿಕೊಂಡಿವೆ. ವಿಡಿಯೋದ ತುಣುಕೊಂದರಲ್ಲಿ ಓರ್ಫಿಶ್​ನ್ನು ಹಿಡಿಯಲು ಡೈವ್​ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮುಂದಾಗಿದ್ದನ್ನು ಕಾಣಬಹುದಾಗಿದೆ. ಆದರೆ ಇವರ ಸ್ಪರ್ಶಕ್ಕೆ ಮೀನು ಸಿಗೋದಿಲ್ಲ.

ತೈವಾನ್​​ನ ಈಶಾನ್ಯ ಕರಾವಳಿಯಲ್ಲಿ ಅನೇಕ ಅದ್ಭುತ ಜಲಚರಗಳನ್ನು ಕಾಣಬಹುದಾಗಿದೆ. ದೈತ್ಯ ಓರ್​ಫಿಶ್​ನೊಂದಿಗೆ ಇದು ನನ್ನ ಮೊದಲ ಮುಖಾಮುಖಿ ಎಂದು ಡೈವಿಂಗ್​ ಗೈಡ್​​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://youtu.be/a3gA3G2S7dk

For Latest News Updates, Join Our Whatsapp Community🚩
RELATED ARTICLES

Most Popular