HomeAgricultureಟೊಮ್ಯಾಟೋ ಮಾರಿ ಒಂದೇ ತಿಂಗಳಲ್ಲಿ 1.5 ಕೋಟಿ ರೂ. ಗಳಿಸಿದ ರೈತ....!

ಟೊಮ್ಯಾಟೋ ಮಾರಿ ಒಂದೇ ತಿಂಗಳಲ್ಲಿ 1.5 ಕೋಟಿ ರೂ. ಗಳಿಸಿದ ರೈತ….!

ದೇಶಾದ್ಯಂತ ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿದ್ದು ಗೃಹಿಣಿಯರಿಗೆ, ಹೋಟೆಲ್ ಉದ್ಯಮದವರಿಗೆ ಇದು ದೊಡ್ಡ ಹೊರೆಯಾದರೆ ಬೆಳೆಗಾರರಿಗೆ ವರವಾಗಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಟೊಮ್ಯಾಟೊ ಬೆಳೆದ ರೈತರೊಬ್ಬರು ಜಾಕ್ ಪಾಟ್ ಹೊಡೆದಿದ್ದಾರೆ.

ರೈತ ತುಕಾರಾಂ ಭಾಗೋಜಿ ಗಾಯಕರ್ ಮತ್ತು ಅವರ ಕುಟುಂಬವು ಒಂದು ತಿಂಗಳಲ್ಲಿ 13,000 ಟೊಮ್ಯಾಟೊ ಕ್ರೇಟ್‌ಗಳನ್ನು ಮಾರಾಟ ಮಾಡುವ ಮೂಲಕ 1.5 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸಿದೆ.

ತುಕಾರಾಂ ಅವರು 18 ಎಕರೆ ಕೃಷಿ ಭೂಮಿ ಹೊಂದಿದ್ದು 12 ಎಕರೆ ಜಮೀನಿನಲ್ಲಿ ತಮ್ಮ ಮಗ ಈಶ್ವರ್ ಗಾಯಕರ್ ಮತ್ತು ಸೊಸೆ ಸೊನಾಲಿ ಅವರ ಸಹಾಯದಿಂದ ಟೊಮ್ಯಾಟೊ ಕೃಷಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತಮ ಗುಣಮಟ್ಟದ ಟೊಮ್ಯಾಟೊಗಳನ್ನು ಬೆಳೆಯುವ ಈ ಕುಟುಂಬ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದೆ. ಇದರಿಂದಾಗಿ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿದೆ.

ನಾರಾಯಣಗಂಜ್‌ನಲ್ಲಿ ಒಂದು ಟೊಮ್ಯಾಟೊ ಕ್ರೇಟ್ ಮಾರಾಟ ಮಾಡುವ ಮೂಲಕ ರೈತ ತುಕಾರಾಂ ದಿನಕ್ಕೆ 2,100 ರೂ. ಗಳಿಸಿದರು. ಶುಕ್ರವಾರ ಒಟ್ಟು 900 ಕ್ರೇಟ್ ಮಾರಾಟ ಮಾಡಿದ್ದು, ಒಂದೇ ದಿನದಲ್ಲಿ 18 ಲಕ್ಷ ರೂ. ಹಣ ಪಡೆದಿದ್ದಾರೆ.

ಕಳೆದ ತಿಂಗಳು ಅವರು ಗುಣಮಟ್ಟದ ಆಧಾರದ ಮೇಲೆ ಪ್ರತಿ ಕ್ರೇಟ್‌ಗೆ 1,000 ರಿಂದ 2,400 ರೂ.ವರೆಗೆ ಟೊಮ್ಯಾಟೊ ಕ್ರೇಟ್‌ಗಳನ್ನು ಮಾರಾಟ ಮಾಡಿದ್ದಾರೆ. ಪುಣೆ ಜಿಲ್ಲೆಯ ಜುನ್ನಾರ್ ನಲ್ಲಿ ಈಗ ಟೊಮ್ಯಾಟೊ ಬೆಳೆಯುತ್ತಿರುವ ಹಲವು ರೈತರು ಲಕ್ಷಾಧಿಪತಿಗಳಾಗಿದ್ದಾರೆ.

ತುಕಾರಾಂ ಅವರ ಸೊಸೆ ಸೋನಾಲಿ ನಾಟಿ, ಕಟಾವು, ಪ್ಯಾಕೇಜಿಂಗ್‌ನಂತಹ ಕೆಲಸಗಳನ್ನು ನಿರ್ವಹಿಸುತ್ತಿದ್ದರೆ, ಅವರ ಮಗ ಈಶ್ವರ್ ಮಾರಾಟ, ನಿರ್ವಹಣೆ ಮತ್ತು ಹಣಕಾಸು ಯೋಜನೆಯನ್ನು ನಿರ್ವಹಿಸುತ್ತಾರೆ. ಕಳೆದ ಮೂರು ತಿಂಗಳಿನಿಂದ ಅವರ ಕಠಿಣ ಪರಿಶ್ರಮದಿಂದ ಉತ್ತಮವಾದ ಫಲವನ್ನು ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular