
ಈ ವಿಚಾರವಾಗಿ ಮಾತನಾಡಿರುವ ನಟ ವಿಜಯ್ ವರ್ಮಾ, ಹೌದು ನಾವು ಪರಸ್ಪರ ಡೇಟಿಂಗ್ನಲ್ಲಿದ್ದೇವೆ. ಈಗ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದೇವೆ. ನಾನು ತಮನ್ನಾರನ್ನು ಪ್ರೀತಿಸುತ್ತಿದ್ದೇನೆ. ನನ್ನ ಖಳನಾಯಕ ಎರಾವನ್ನು ಮುಗಿಸಿ ಇದೀಗ ನಾನು ಪ್ರಣಯ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಲಸ್ಟ್ ಸ್ಟೋರಿಸ್ 2 ಸಹನಟ ವಿಜಯ್ ವರ್ಮಾ ಜೊತೆ ಡೇಟಿಂಗ್ನಲ್ಲಿ ಇರುವ ಬಗ್ಗೆ ಮಾತನಾಡಿದ್ದ ತಮನ್ನಾ, ಮಹಿಳೆಯರು ತಮ್ಮ ಮೂಲಭೂತ ಭಾವನೆಗಳ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಸದ್ಯ ನಟಿ ತಮನ್ನಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಾವಾಲಿಯಾ ಸಾಂಗ್ ಮೂಲಕ ಹೊಸ ಕ್ರೇಜ್ ಸೃಷ್ಟಿಸಿದ್ದಾರೆ. ಇದರಲ್ಲಿ ತಮನ್ನ ಹೆಜ್ಜೆ ಹಾಕಿದ ರೀತಿ ಸಖತ್ ಫೇಮಸ್ ಆಗಿದ್ದು ರೀಲ್ಸ್ಗಳಲ್ಲಿ ಜನರು ಹುಚ್ಚೆದ್ದು ತಮನ್ನಾರನ್ನು ಫಾಲೋ ಮಾಡ್ತಿದ್ದಾರೆ.

