HomeLatest Newsಗ್ರಾಹಕರೇ ಗಮನಿಸಿ : `ATM’ ನಲ್ಲಿ ಟ್ರಾನ್ಸಾಕ್ಷನ್ ಫೇಲ್ ಅಂತಾ ಬಂದ್ರೂ ಹಣ ಕಡಿತವಾಗಿದೆಯಾ? ಈ...

ಗ್ರಾಹಕರೇ ಗಮನಿಸಿ : `ATM’ ನಲ್ಲಿ ಟ್ರಾನ್ಸಾಕ್ಷನ್ ಫೇಲ್ ಅಂತಾ ಬಂದ್ರೂ ಹಣ ಕಡಿತವಾಗಿದೆಯಾ? ಈ ರೀತಿ ಮಾಡಿ ಸಾಕು

ಹಣ ವಿತ್‌ ಡ್ರಾ ಮಾಡುವುದು ಹಾಗೂ ಇನ್ನಿತರ ವಹಿವಾಟುಗಳನ್ನು ಬ್ಯಾಂಕ್‌ ಶಾಖೆಗೆ ಹೋಗದೆಯೇ ಮಾಡಲೆಂದೇ ಎಟಿಎಂಗಳಿವೆ. ಎಟಿಎಂಗಳ ಮೂಲಕ ನೀವು ಬಿಲ್‌ ಪಾವತಿಸಬಹುದು, ಹಣವನ್ನು ಡೆಪಾಸಿಟ್‌ ಮಾಡಬಹುದು, ಹಣವನ್ನು ಖಾತೆಯಿಂದ ಖಾತೆಗೆ ವರ್ಗಾವಣೆ ಕೂಡ ಮಾಡಿಕೊಳ್ಳಬಹುದು.

ಎಟಿಎಂಗಳಲ್ಲಿ ಡೆಬಿಟ್‌ ಕಾರ್ಡ್‌ ಅಥವಾ ಎಟಿಎಂ ಕಾರ್ಡ್‌ಗಳನ್ನು ಬಳಸಲು ವೈಯುಕ್ತಿಕ ಗುರುತಿನ ಸಂಖ್ಯೆಯ ಅಗತ್ಯವಿರುತ್ತದೆ. ಕೆಲವೊಮ್ಮೆ ಈ ಎಟಿಎಂ ವಹಿವಾಟಿನಲ್ಲೂ ಸಮಸ್ಯೆಗಳಾಗಬಹುದು. ನಿಮ್ಮ ವಹಿವಾಟು ಫೇಲ್ಡ್‌ ಎಂದು ಬಂದಿದ್ದರೂ ಖಾತೆಯಿಂದ ಹಣ ಡಿಡಕ್ಟ್‌ ಆಗಿರುವ ಸಾಧ್ಯತೆ ಇರುತ್ತದೆ. ಆರ್‌ಬಿಐ ಪ್ರಕಾರ ಅಂತಹ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ವಹಿವಾಟನ್ನು ಹಿಮ್ಮುಖಗೊಳಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಟಿಎಂ ಕಾರ್ಡ್‌ ಸಮಸ್ಯೆಯಾದಾಗ ತಕ್ಷಣವೇ ಗ್ರಾಹಕರು ಬ್ಯಾಂಕ್‌ಗೆ ದೂರು ಕೊಡಬೇಕು. ಟ್ರಾನ್ಸಾಕ್ಷನ್‌ ಫೇಲ್‌ ಅಂತಾ ಬಂದಿದ್ದರೂ ಹಣ ಡೆಬಿಟ್‌ ಆಗಿದ್ದರೆ ಐದು ದಿನಗಳೊಳಗೆ ಬ್ಯಾಂಕ್‌ ಆ ಮೊತ್ತವನ್ನು ಗ್ರಾಹಕರ ಖಾತೆಗೆ ವರ್ಗಾಯಿಸಬೇಕು. 5 ದಿನಗಳೊಳಗೆ ಮೊತ್ತವನ್ನು ಭರಿಸದೇ ಇದ್ದಲ್ಲಿ ಹೆಚ್ಚುವರಿ ಪರಿಹಾರ ಹಣವನ್ನು ಬ್ಯಾಂಕ್‌ ಕೊಡಬೇಕಾಗುತ್ತದೆ.

ಐದು ದಿನಗಳೊಳಗೆ ಆ ಹಣವನ್ನ ಭರಿಸದೇ ಇದ್ದಲ್ಲಿ ದಿನಕ್ಕೆ 100 ರೂಪಾಯಿಯಂತೆ ಹೆಚ್ಚುವರಿ ಮೊತ್ತವನ್ನು ಬ್ಯಾಂಕ್‌ ನೀಡಬೇಕು ಎಂಬುದು ಆರ್‌ಬಿಐ ನಿಯಮ. ಇದನ್ನು ಬ್ಯಾಂಕ್‌ಗಳು ಪಾಲಿಸದೇ ಇದ್ದಲ್ಲಿ 30 ದಿನಗಳ ಬಳಿಕ ಗ್ರಾಹಕರು ಆರ್‌ಬಿಐಗೆ ದೂರು ನೀಡಬಹುದು. ಅಥವಾ ಆನ್‌ಲೈನ್‌ನಲ್ಲೂ ದೂರು ದಾಖಲಿಸಲು ಅವಕಾಶವಿದೆ. ಗ್ರಾಹಕರು https://cms.rbi.org.in/cms/indexpage.html#eng (Complaint Management System) ಮೂಲಕ ದೂರು ನೀಡಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular