HomeKarnatakaBIG NEWS : ನಟ, ನಿರೂಪಕ ‘ಮಾಸ್ಟರ್ ಆನಂದ್’ ಪುತ್ರಿ ಹೆಸರಿನಲ್ಲಿ 40 ಲಕ್ಷ ವಂಚನೆ...

BIG NEWS : ನಟ, ನಿರೂಪಕ ‘ಮಾಸ್ಟರ್ ಆನಂದ್’ ಪುತ್ರಿ ಹೆಸರಿನಲ್ಲಿ 40 ಲಕ್ಷ ವಂಚನೆ : ‘ಖತರ್ನಾಕ್ ಲೇಡಿ’ ಸೆರೆ

ಬೆಂಗಳೂರು : ಸ್ಯಾಂಡಲ್ ವುಡ್ ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ವಂಚನೆ ನಡೆದಿದ್ದು, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಶಾ ನರಸಪ್ಪ ಎಂಬ ಹೆಸರಿನ ಮಹಿಳೆ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಿನಲ್ಲಿ ಹಣಕಾಸು ವಂಚನೆ ಎಸಗಿದ್ದಾಳೆ ಎಂಬ ಆರೋಪವಿದ್ದು, ಪ್ರಕರಣ ದಾಖಲಾಗಿದೆ.

ಮಕ್ಕಳ ಕಾರ್ಯಕ್ರಮ, ಟ್ಯಾಲೆಂಟ್ ಶೋ, ವಿವಿಧ ಜಾಹೀರಾತು ನೆಪದಲ್ಲಿ  40 ಲಕ್ಷ ವಂಚನೆ  ವಂಚನೆ ಮಾಡಿದ ಖತರ್ನಾಕ್ ಲೇಡಿ ನೂರಾರು ಜನ ಪೋಷಕರಿಂದ ಹಣ ಪಡೆದು ವಂಚಿಸಿದ್ದಾಳೆ ಎನ್ನಲಾಗಿದೆ. ನಂತರ ಹಣ ಕಳೆದುಕೊಂಡು ಪೋಷಕರು ಒಟ್ಟಾಗಿ ವಂಚಕಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.ಘಟನೆ ಸಂಬಂಧ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ನಿಶಾಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular