
ಚುನಾವಣಾ ಕಾರ್ಯತಂತ್ರ ರೂಪಿಸಲು ಇತ್ತೀಚೆಗೆ ಸೇರಿದ್ದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಎಲ್ಲವನ್ನು ಮರೆತು ಕ್ಷಮಿಸಿ ಮುನ್ನಡೆಯಿರಿ ಎಂದು ಸಲಹೆ ರೂಪದಲ್ಲಿ ನಿರ್ದೇಶನ ನೀಡಿದ್ದು ಇದಕ್ಕೆ ಉಭಯ ಬಣಗಳು ಸಹ ಸಮ್ಮತಿಸಿವೆ.
ಈ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಚಿನ್ ಪೈಲಟ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಲಹೆಯಂತೆ ಭಿನ್ನಮತವನ್ನು ನಾವು ಕೈ ಬಿಟ್ಟಿದ್ದೇವೆ. ಸಾಮೂಹಿಕ ನಾಯಕತ್ವದಡಿ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಹೇಳಿದ್ದಾರೆ.

