HomeKarnatakaಎಣ್ಣೆ ಮತ್ತಿನಲ್ಲಿ ಯುವಕರ ಪುಂಡಾಟ : `KSRTC’ ಬಸ್ ನ ಗ್ಲಾಸ್ ಒಡೆದು, ಚಾಲಕನ ಮೇಲೆ...

ಎಣ್ಣೆ ಮತ್ತಿನಲ್ಲಿ ಯುವಕರ ಪುಂಡಾಟ : `KSRTC’ ಬಸ್ ನ ಗ್ಲಾಸ್ ಒಡೆದು, ಚಾಲಕನ ಮೇಲೆ ಹಲ್ಲೆ!

ಚಿಕ್ಕಮಗಳೂರು : ಚಿಕ್ಕಮಗಳುರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ಕುಡಿದ ಮತ್ತಿನಲ್ಲಿ ಯುವಕರು ಪುಂಡಾಟ ಮೆರೆದಿದ್ದು, ಕೆಎಸ್ ಆರ್ ಟಿಸಿ ಬಸ್ ನ ಗ್ಲಾಸ್ ಒಡೆದು,ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಬೀರೂರು ಸಮೀಪದ ‌ಹೋರಿತಿಮ್ಮನಹಳ್ಳಿ ಗೇಟ್ ಬಳಿ ಕಡೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿನ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿನಿಂದ ಯುವಕರು ಗಾಜಿನ ಮದ್ಯದ ಬಾಟಲಿಯನ್ನ ಎಸೆದಿದ್ದಾರೆ. ಇದು ಬಸ್ಸಿನ ಮುಂಭಾಗದ ಗ್ಲಾಸಿಗೆ ತಗುಲಿ ಗಾಜು ಪುಡಿಯಾಗಿದೆ. ಈ ವೇಳೆ  ಚಾಲಕ ಸತೀಶ್ ಕೇಳು ಹೋಗಿದ್ದಕ್ಕೆ ಕೋಪಗೊಂಡ ಯುವಕರು ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಲ್ಲೆಗೊಳಗಾದ ಚಾಲಕ ಸತೀಶ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದೆ. ಪುಂಡಾಟ ಮೆರೆದ ಕಿರಣ್, ಸತೀಶ್, ಸಚಿನ್, ಸುಪ್ರೀತ್ ಎಂಬುವವರನ್ನ ಬಂಧಿಸಲಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular