HomeIndia'ಹಮ್ ದಿಲ್ ದೇ ಚುಕೆ ಸನಮ್' ಸಿನಿಮಾದಂತೆ ಪ್ರಿಯಕರನೊಂದಿಗೆ ಪತ್ನಿಯ ಮದುವೆ ಮಾಡಿಸಿದ ಪತಿ

‘ಹಮ್ ದಿಲ್ ದೇ ಚುಕೆ ಸನಮ್’ ಸಿನಿಮಾದಂತೆ ಪ್ರಿಯಕರನೊಂದಿಗೆ ಪತ್ನಿಯ ಮದುವೆ ಮಾಡಿಸಿದ ಪತಿ

ಪಾಟ್ನಾ: ‘ಹಮ್ ದಿಲ್ ದೇ ಚುಕೆ ಸನಮ್’ ಹಿಂದಿ ಸಿನಿಮಾ ರೀತಿಯಲ್ಲೇ ವ್ಯಕ್ತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿದ ಘಟನೆ ನಡೆದಿದೆ.

ಬಿಹಾರದ ನವಾಡ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಪತಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಂದರ್ಭದಲ್ಲಿ ತಡರಾತ್ರಿ ಮಹಿಳೆಯನ್ನು ಭೇಟಿಯಾಗಲು ಆಕೆಯ ಪ್ರಿಯಕರ ಮನೆಗೆ ಬಂದಿದ್ದಾನೆ. ಕುಟುಂಬದವರ ಕೈಗೆ ಇಬ್ಬರೂ ಸಿಕ್ಕಿ ಬಿದ್ದಿದ್ದು, ಕುಟುಂಬದ ಸದಸ್ಯರು ಮಹಿಳೆಯ ಪ್ರಿಯಕರನನ್ನು ಥಳಿಸಿದ್ದಾರೆ. ಇಬ್ಬರೂ ಊರು ಬಿಟ್ಟು ಹೋಗುವಂತೆ ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲಸ ಮುಗಿಸಿ ಮನೆಗೆ ಬಂದ ಪತಿಗೆ ವಿಷಯ ಗೊತ್ತಾಗಿದೆ. ಕೂಡಲೇ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಅಂದ ಹಾಗೆ, ಪ್ರಿಯಕರನಿಗೆ ಈಗಾಗಲೇ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಆತನ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ.

ಪ್ರಿಯಕರನೊಂದಿಗೆ ಪತ್ನಿಯ ಮದುವೆ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular