ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ರಾಜಕೀಯ ಬೆಳವಣಿಗೆ ನಡೆದ ನಂತರ ಎನ್ ಸಿ ಪಿ ಗೆ ನಾಯಕ ಯಾರೆಂಬ ಕುರಿತು ಪೈಪೋಟಿ ನಡೆದಿದೆ. ಪಕ್ಷದ ಈ ರಾಜಕಾರಣ ಈಗ ರಾಷ್ಟ್ರ ರಾಜಧಾನಿಯನ್ನು ತಲುಪಿದ್ದು, ಹಿರಿಯ ನಾಯಕ ಶರದ್ ಪವಾರ್ ನವದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಸಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿರುವ ಶರದ್ ಪವಾರ್, ನಮ್ಮದೇ ನಿಜವಾದ ಎನ್ ಸಿ ಪಿ. ನಾನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂದು ಹೇಳಿದ್ದಾರಲ್ಲದೆ ಬಂಡಾಯ ಸಾರಿರುವ ಅಜಿತ್ ಪವಾರ್ ಸೇರಿದಂತೆ ಭಿನ್ನಮತಿಯರ ವಿರುದ್ಧ ಗುಡುಗಿದ್ದಾರೆ.
ಅಜಿತ್ ಪವಾರ್ ಹಾಗೂ ಅವರ ಜೊತೆ ಕೈಜೋಡಿಸಿರುವ 8 ಬಂಡಾಯ ಶಾಸಕರು ಮತ್ತು ಇಬ್ಬರು ಸಂಸದರನ್ನು ಪಕ್ಷದಿಂದ ವಜಾಗೊಳಿಸಲಾಗಿದ್ದು, ಅಜಿತ್ ಬಂಡಾಯದ ವಿರುದ್ಧ ಕಾನೂನು ಹೋರಾಟ ನಡೆಸುವುದರ ಜೊತೆಗೆ ಚುನಾವಣಾ ಆಯೋಗಕ್ಕೂ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ.