HomeKarnatakaBIG NEWS: ಸ್ಪೀಕರ್ ಖಾದರ್ ಕನ್ನಡದ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ; 'ಸ್ಪೀಕರ್ ಟು ಕನ್ನಡ...

BIG NEWS: ಸ್ಪೀಕರ್ ಖಾದರ್ ಕನ್ನಡದ ಬಗ್ಗೆ ಸದನದಲ್ಲಿ ಸ್ವಾರಸ್ಯಕರ ಚರ್ಚೆ; ‘ಸ್ಪೀಕರ್ ಟು ಕನ್ನಡ ಆಪ್’ ಮಾಡಿ ಎಂದು ಕಾಲೆಳೆದ ಯತ್ನಾಳ್

ಬೆಂಗಳೂರು: ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರ ಕನ್ನಡದ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಯಿತು. ಈ ವೇಳೆ ಸ್ಪೀಕರ್ ಖಾದರ್, ನನ್ನ ಕನ್ನಡವನ್ನು ಶಾಸಕ ಯತ್ನಾಳ್ ಅವರು ಪದೇ ಪದೇ ಸರಿಪಡಿಸುತ್ತಾರೆ. ನನ್ನ ಕನ್ನಡ ಹೆಚ್ಚು ಕಡಿಮೆ ಇದೆ ಆದ್ರೆ ಕನ್ನಡ ನಮ್ಮ ಪ್ರೀತಿಯ ಭಾಷೆ. ಸಹೋದರತೆ, ಸಾಮರಸ್ಯದ ಭಾಷೆ ಹಾಗಾಗಿ ನಾನು ಕೃತಜ್ಞತೆ ಹೇಳುತ್ತೇನೆ ಎಂದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಶಾಸಕ ಯತ್ನಾಳ್, ನಿಮ್ಮ ಭಾಷೆ ನಮಗೆ ಅರ್ಥವಾಗಬೇಕಲ್ಲ ಹಾಗಾಗಿ ಸ್ಪೀಕರ್ ಟು ಕನ್ನಡ ಆಪ್ ಎಂದು ಹೊಸ ಆಪ್ ಮಾಡಿಕೊಡಿ ಎಂದು ಕಾಲೆಳೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮಸ್ಯೆ ಏನೆಂದರೆ ನಮ್ಮ ಕನ್ನಡ ಬೇರೆ, ಹೈದರಾಬಾದ್ ಕನ್ನಡ ಬೇರೆ, ಮೈಸೂರು ಕನ್ನಡ ಬೇರೆ, ಮಂಗಳೂರು ಕನ್ನಡ ಬೇರೆ, ಮುಂಬೈ ಕನ್ನಡ ಬೇರೆ. ಹೀಗಾಗಿ ನಿಮ್ಮ ಭಾಷೆ ಅರ್ಥವಾಗಬೇಕಲ್ಲ ಮೊಬೈಲ್ ನಲ್ಲಿ ಆಪ್ ಹಾಕಿಕೊಡಿ. ಈಗ ಮೊಬೈಲ್ ನಲ್ಲಿ ಯುಎಸ್ ಇಂಗ್ಲೀಷ್, ಇಂಗ್ಲೆಂಡ್ ಇಂಗ್ಲೀಷ್ ಇದ್ದ ಹಾಗೇ. ಲೋಕಸಭೆಯಲ್ಲಿ ಹಿಂದಿ ಟು ಕನ್ನಡ, ಕನ್ನಡ ಟು ಹಿಂದಿ ಇದ್ದ ಹಾಗೇ ಸ್ಪೀಕರ್ ಟು ಕನ್ನಡ ಆಪ್ ಮಾಡಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular