HomeKarnatakaವರ್ಗಾವಣೆ ದಂಧೆ ಆರೋಪ : ಕುಮಾರಸ್ವಾಮಿಗೆ ಅಧಿವೇಶನದಲ್ಲೇ ಉತ್ತರಿಸುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ!

ವರ್ಗಾವಣೆ ದಂಧೆ ಆರೋಪ : ಕುಮಾರಸ್ವಾಮಿಗೆ ಅಧಿವೇಶನದಲ್ಲೇ ಉತ್ತರಿಸುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ!

ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದು, ಹೆಚ್.ಡಿ.ಕುಮಾರಸ್ವಾಮಿ ಅವರು ಯಾವಗಲೂ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಆರೋಪ ಮಾಡಿದ್ದಾರೆ. ಹಾಗದ್ರೆ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಇದ್ದಾಗ ಹಣ ತೆಗೆದುಕೊಂಡಿದ್ರಾ? ಆ ರೀತಿ ಊಹಿಸಿಕೊಳ್ಳುವುದು ಸರಿಯಲ್ಲ. ಯಾವ ಪ್ರಕರಣ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ಪುತ್ರ ಯತೀಂದ್ರ ಮನೆಯಲ್ಲಿ ಇರುತ್ತಾರೆ. ಅವರು ಮಾಜಿ ಶಾಸಕರು. ಹೆಚ್.ಡಿ.ಕುಮಾರಸ್ವಾಮಿ ಪುತ್ರ ಮನೆಯಲ್ಲಿರುತ್ತಾರೆ. ಹೆಚ್.ಡಿ.ಕುಮಾರಸ್ವಾಮಿ ಅಣ್ಣ ಸಚಿವರು ಆಗಿದ್ದರು. ತಂದೆ ಪಿಎಂ ಆಗಿದ್ದರು. ಅಣ್ಣ, ಮಕ್ಕಳು ಶಾಸಕರು ಆಗಿದ್ದರು. ಅವರಿಗೆ ಏನಂತ ಕರೆಯಬೇಕು. ಕುಮಾರಸ್ವಾಮಿ ಆರೋಪಕ್ಕೆ ಅಧಿವೇಶನದಲ್ಲೇ ಉತ್ತರಿಸುತ್ತನೆ ಎಂದರು.

For Latest News Updates, Join Our Whatsapp Community🚩
RELATED ARTICLES

Most Popular