HomeKarnatakaಜು.23 ರಂದು ಕೊಡಗು ಜಿಲ್ಲೆಯ 5 ಗ್ರಾ.ಪಂ.ಗಳ 9 ಸ್ಥಾನಗಳಿಗೆ ಮತದಾನ

ಜು.23 ರಂದು ಕೊಡಗು ಜಿಲ್ಲೆಯ 5 ಗ್ರಾ.ಪಂ.ಗಳ 9 ಸ್ಥಾನಗಳಿಗೆ ಮತದಾನ

ಮಡಿಕೇರಿ : ರಾಜ್ಯ ಚುನಾವಣಾ ಆಯೋಗವು ವಿವಿಧ ಕಾರಣಗಳಿಗೆ ತೆರವಾದ/ ಖಾಲಿ ಇರುವ ಕೊಡಗು ಜಿಲ್ಲೆಯ 5 ಗ್ರಾಮ ಪಂಚಾಯಿತಿಗಳ 9 ಸದಸ್ಯ ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದೆ.

ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮ ಪಂಚಾಯಿತಿಯ 4, ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿಯ 1, ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡುವಿನ 2, ಕಾಂತೂರು ಮೂರ್ನಾಡುವಿನ 1 ಹಾಗೂ ಕಡಗದಾಳುವಿನ 1 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜುಲೈ, 06 ರಂದು ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಜುಲೈ, 12 ಕೊನೆಯ ದಿನವಾಗಿದೆ. ಜುಲೈ, 13 ರಂದು ನಾಮಪತ್ರ ಪರಿಶೀಲನೆ, ಜುಲೈ, 15 ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಳ್ಳಲು ಕೊನೆಯ ದಿನ. ಜುಲೈ, 23 ರಂದು ಮತದಾನ ನಡೆಯಲಿದ್ದು, ಅವಶ್ಯವಿದ್ದರೆ ಮರು ಮತದಾನವು ಜುಲೈ, 25 ರಂದು ನಡೆಯಲಿದೆ. ಜುಲೈ, 26 ರಂದು ಮತ ಎಣಿಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular