HomeKarnatakaBIG NEWS: 'ಮೊಂಡಾಟ’ ಪದ ಬಳಸಿದ ಸಿಎಂ ವಿರುದ್ಧ ಬಿ.ಎಸ್ ಯಡಿಯೂರಪ್ಪ ಗರಂ

BIG NEWS: ‘ಮೊಂಡಾಟ’ ಪದ ಬಳಸಿದ ಸಿಎಂ ವಿರುದ್ಧ ಬಿ.ಎಸ್ ಯಡಿಯೂರಪ್ಪ ಗರಂ

ಬೆಂಗಳೂರು: ವಿಧಾನಸಭೆಯ ಕಲಾಪದ  ವೇಳೆ  ವಿಪಕ್ಷ ಬಿಜೆಪಿ ಪ್ರತಿಭಟನೆಗೆ ಗರಂ ಆಗಿದ್ದ ಸಿಎಂ ಸಿದ್ದರಾಮಯ್ಯ ಬಿಜೆಪಿ ’ಮೊಂಡಾಟ’ ಮಾಡುವುದನ್ನು ಬಿಡಲಿ ಎಂದು ಗುಡುಗಿದ್ದರು. ಇದೀಗ ಸಿಎಂ ‘ಮೊಂಡಾಟ’ ಪದ ಬಳಕೆ ವಿರುದ್ಧ ಬಿಜೆಪಿ ನಾಯಕರು ಮುಗಿ ಬಿದ್ದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿಗಳು ಬೇಜವಾಬ್ದಾರಿಯಿಂದ ಮಾತನಾಡುವುದನ್ನು ನಿಲ್ಲಿಸಬೇಕು. ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ತಕ್ಷಣ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಎಂ ಮನಬಂದಂತೆ ಮಾತನಾಡುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿ. ಇದನ್ನು ನಾವು ಇಲ್ಲಿಗೆ ನಿಲ್ಲಿಸಲ್ಲ. ಜಿಲ್ಲೆ ಜಿಲ್ಲೆಗಳಿಗೆ ಹೋಗಿ ಹೋರಾಟ ಮಾಡುತ್ತೇವೆ. ಕೊಟ್ಟ ಭರವಸೆಯನ್ನು ಕಾಂಗ್ರೆಸ್ ಮೊದಲು ಈಡೇರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular