ಬೆಂಗಳೂರು: ತೊಗರಿ ಬೇಳೆ ದರ ದುಪ್ಪಟ್ಟಾಗಿದೆ. 90 ರೂಪಾಯಿಯಿಂದ ಏರಿಕೆ ಕಂಡ ತೊಗರಿ ಬೆಳೆ 140 ರೂ.ಗಿಂತಲೂ ಅಧಿಕವಾಗಿದೆ.
ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ತೊಗರಿ ಬೆಳೆ ದರ ಶೇಕಡ 50ರಷ್ಟು ಹೆಚ್ಚಳವಾಗಿದೆ. ಪೂರೈಕೆ ಮತ್ತು ಬೇಡಿಕೆ ನಡುವಿನ ತೀವ್ರ ಅಂತರ ಬೆಲೆ ಏರಿಕೆಗೆ ಕಾರಣವಾಗಿದೆ. ಪೂರೈಕೆ ಮತ್ತು ಬೇಡಿಕೆ ಸಮಸ್ಯೆಯಿಂದ ವ್ಯಾಪಾರಿಗಳು ಪರಿಸ್ಥಿತಿಯ ಲಾಭ ಪಡೆದು ಬೆಲೆ ಹೆಚ್ಚಳ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ರಾಜ್ಯದಲ್ಲಿ ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಪ್ರಮುಖವಾಗಿ ತೊಗರಿ ಬೆಳೆಯಲಾಗುತ್ತದೆ. ನೆಟೆ ರೋಗದ ಕಾರಣದಿಂದ ತೊಗರಿ ಶೇಕಡ 40ರಷ್ಟು ಹಾಳಾಗಿದೆ. ಹೀಗಾಗಿ ಬೆಳೆ ಇಲ್ಲದೆ ಉತ್ಪಾದನೆ ಕುಂಠಿತವಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.